ದೇಶ

ರಾಜ್ ಠಾಕ್ರೆಯ ಪ್ರಚೋದನಕಾರಿ ಭಾಷಣದ ನಂತರ ಆಟೋಗೆ ಬೆಂಕಿ!

ಮುಂಬೈಗೆ ವಲಸೆ ಬಂದು ಆಟೋ ಚಲಾಯಿಸುತ್ತಿರುವ ವ್ಯಕ್ತಿಗಳ ಆಟೋಗೆ ಬೆಂಕಿ ಹಚ್ಚಿ ಎಂದು ಮಹರಾಷ್ಟ್ರ ನವ ನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ...

ರಾಜ್ ಠಾಕ್ರೆಯ ಪ್ರಚೋದನಕಾರಿ ಭಾಷಣದ ನಂತರ ಆಟೋಗೆ ಬೆಂಕಿ!
ಬೆಂಕಿಗಾಹುತಿಯಾದ ಆಟೋ (ಕೃಪೆ: ಎಎನ್ ಐ)
Published On :
ಮುಂಬೈ: ಮುಂಬೈಗೆ ವಲಸೆ ಬಂದು ಆಟೋ ಚಲಾಯಿಸುತ್ತಿರುವ ವ್ಯಕ್ತಿಗಳ ಆಟೋಗೆ ಬೆಂಕಿ ಹಚ್ಚಿ ಎಂದು ಮಹರಾಷ್ಟ್ರ ನವ ನಿರ್ಮಾಣ್ ಸೇನೆಯ ಮುಖ್ಯಸ್ಥ ರಾಜ್‌ಠಾಕ್ರೆ ಪ್ರಚೋದನಕಾರಿ ಭಾಷಣ ಮಾಡಿದ ನಂತರ ಗುರುವಾರ ಸಂಜೆ ಅಂಧೇರಿಯಲ್ಲಿ ಆಟೋವೊಂದಕ್ಕೆ ಬೆಂಕಿ ಹಚ್ಚಲಾಗಿದೆ.
ಆಗಂತುಕರು ಆಟೋವೊಂದಕ್ಕೆ ಬೆಂಕಿ ಹಚ್ಚಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಮುಂಬೈನಲ್ಲಿ ಶೇ. 70ರಷ್ಟು ವಲಸೆ ಬಂದವರು ಆಟೋ ಚಲಾಯಿಸುತ್ತಿದ್ದಾರೆ. ಮುಂಬೈ ರಸ್ತೆಗಳಿರುವುದು ಮುಂಬೈಯವರಿಗೆ ಮಾತ್ರ, ಹೊರಗಿನಿಂದ ಬಂದವರಿಗೆ ಅಲ್ಲ. ಹಾಗಂತ ವಲಸೆ ಬಂದವರು ಹೊಸ ಪರವಾನಗಿ ಪಡೆದು ಮುಂಬೈನಲ್ಲಿ ಆಟೋ ಚಲಾಯಿಸಿದರೆ ಚಾಲಕನನ್ನು ಹೊರಗೆ ಕರೆದು ಆಮೇಲೆ ಆಟೋಗೆ ಬೆಂಕಿ ಹಚ್ಚಿ ಎಂದು ಠಾಕ್ರೆ ಭಾಷಣವೊಂದರಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.