ಮಹಿಳಾ ದಿನಾಚರಣೆಗೆ ಗೂಗಲ್ ಡ್ಯೂಡಲ್
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಅಂಗವಾಗಿ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ವಿಶೇಷ ಡ್ಯೂಡಲ್ ...

ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಅಂಗವಾಗಿ ಸರ್ಚ್ ಎಂಜಿನ್ ಗೂಗಲ್ ಸಂಸ್ಥೆ ವಿಶೇಷ ಡ್ಯೂಡಲ್ ಮೂಲಕ ಮಹಿಳಾ ದಿನಾಚರಣೆ ಆಚರಿಸಿದೆ.
ವಿಶೇಷ ಡ್ಯೂಡಲ್ ಮೂಲಕ ಗೂಗಲ್ ಮಹಿಳೆಯರಿಗೆ ಗೌರವ ಸಲ್ಲಿಸಿದೆ. ಪ್ರತಿ ವರ್ಷ ಮಾ.8 ರಂದು ಮಹಿಳಾ ದಿನಾಚರಣೆ ಆಚರಿಸಲಾಗುತ್ತದೆ. ಅವರ ಸಾಧನೆಗೆ ಸ್ಫೂರ್ತಿ ನೀಡಲೆಂದು ಗೂಗಲ್ ತನ್ನ ಮುಖಪುಟದಲ್ಲಿ ಮಹಿಳೆಯರ ಕುರಿತು ಒಂದು ಸಣ್ಣ ವಿಡಿಯೋವನ್ನು ಪೋಸ್ಟ್ ಮಾಡಿದೆ.
ವಿಡಿಯೋದಲ್ಲಿ ಹಲವು ಮಹಿಳೆಯರು ತಮ್ಮ ಕನಸು ಹಾಗೂ ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೊನೆಗೆ "One day I will..." ಎಂದು ಬರೆಯಲಾಗಿದೆ.
ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಜಗತ್ತಿಗೆ ಸಾರಲು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮುಂದಿನ ಭವಿಷ್ಯಕ್ಕಾಗಿ ಇಂದು ಉತ್ತಮ ಕೆಲಸ ಮಾಡುತ್ತಿರುವ ಮಹಿಳೆಯರಿಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಗೂಗಲ್ ನ ಲಿಯಾಚ್ ಬೆನ್ ರಾಫೆಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


