ದೇಶ

ಜಾರ್ಖಂಡ್‌: ಬಿಜೆಪಿ ಅಧ್ಯಕ್ಷನ ಪುತ್ರನಿಂದ ರೇಪ್‌, ಅಪ್ರಾಪ್ತೆ ಜತೆ ವಿವಾಹ ಆರೋಪ

: ನೂತನವಾಗಿ ಆಯ್ಕೆಯಾಗಿರುವ ಜಾರ್ಖಂಡ್‌ ಬಿಜೆಪಿ ಅಧ್ಯಕ್ಷ ತಾಲ ಮರಾಂಡಿ ಅವರಿಗೆ ಸಂಕಷ್ಟ ಎದುರಾಗಿದೆ. ಪುತ್ರ ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ಶೋಷಣೆ ನಡೆಸಿ, ..

ಜಾರ್ಖಂಡ್‌:  ಬಿಜೆಪಿ ಅಧ್ಯಕ್ಷನ ಪುತ್ರನಿಂದ ರೇಪ್‌, ಅಪ್ರಾಪ್ತೆ ಜತೆ ವಿವಾಹ ಆರೋಪ
ಜಾರ್ಖಂಡ್‌ ಬಿಜೆಪಿ ಅಧ್ಯಕ್ಷನ ಪುತ್ರನ ವಿವಾಹ
Published On :

ರಾಂಚಿ: ನೂತನವಾಗಿ ಆಯ್ಕೆಯಾಗಿರುವ ಜಾರ್ಖಂಡ್‌ ಬಿಜೆಪಿ ಅಧ್ಯಕ್ಷ ತಾಲ ಮರಾಂಡಿ ಅವರಿಗೆ ಸಂಕಷ್ಟ ಎದುರಾಗಿದೆ. ಪುತ್ರ ಅಪ್ರಾಪ್ತೆಯೊಬ್ಬಳ ಮೇಲೆ ಲೈಂಗಿಕ ಶೋಷಣೆ ನಡೆಸಿ, ಮದನೆಯಾಗುವುದಾಗಿ ತಪ್ಪು ಭರವಸೆ ನೀಡಿ ಈಗ ವಂಚಿಸುತ್ತಿದ್ದಾನೆ ಎಂದು ಬಾಲಕಿಯೊಬ್ಬಳು ಕೋರ್ಟ್ ಹಾಗೂ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾಳೆ.

ತಾಲ ಮರಾಂಡಿ  ಅವರ ಪುತ್ರ ಮುನ್ನಾ ಮರಾಂಡಿ ಕಳೆದ ಎರಡು ವರ್ಷಗಳಿಂದ ಹುಡುಗಿಯೊಬ್ಬಳನ್ನು ಲೈಂಗಿಕವಾಗಿ ಶೋಷಿಸುತ್ತಿದ್ದು ಕಳೆದ ವಾರ ಆತ ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳನ್ನು ಮದುವೆಯಾಗಿದ್ದಾರೆ ಎಂದು ಆಪಾದಿಸಲಾಗಿದೆ.

ಲೈಂಗಿಕ ಶೋಷಣೆಗೆ ಗುರಿಯಾಗಿರುವ ಹುಡುಗಿಯು ಮುನ್ನಾ ಮರಾಂಡಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಇದೀಗ ಮಾತು ತಪ್ಪಿ ನನಗೆ ಮೋಸ ಮಾಡಿದ್ದಾನೆ' ಎಂದು ಗೊಡ್ಡ ಜಿಲ್ಲೆಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾಳೆ.

ಮುನ್ನಾ ನನ್ನೊಂದಿಗೆ ಸ್ನೇಹ ಮಾಡಿ ಪ್ರೀತಿಯ ನಾಟಕ ಆಡಿದ್ದಾನೆ. ನನ್ನೊಂದಿಗೆ ಸಂಪರ್ಕದಲ್ಲಿರಲು ಆತ ನನಗೆ ಮೊಬೈಲ್‌ ತೆಗೆಸಿಕೊಟ್ಟು ಕಳೆದ ಎರಡು ವರ್ಷಗಳಿಂದ ನನ್ನ ಮೇಲೆ ಲೈಂಗಿಕ ಶೋಷಣೆ ಎಸಗಿದ್ದಾನೆ. ಇದೀಗ ಆತ ಬೇರೊಬ್ಬ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹುಡುಗಿಯು ದೂರಿನಲ್ಲಿ ಹೇಳಿದ್ದಾಳೆ.

ಈ ಹುಡುಗಿಗೆ ಕೈಕೊಟ್ಟ ಬಳಿಕ ಮುನ್ನಾ ಮರಾಂಡಿ ಕಳೆದ ಮಂಗಳವಾರ ಕೇವಲ 11 ವರ್ಷ ಹುಡುಗಿಯನ್ನು ಮದುವೆಯಾಗಿದ್ದಾನೆ. ಬುಧವಾರ ತಮ್ಮ ರಾಜಕೀಯ ಸಹೋದ್ಯೋಗಿಗಳಿಗೆ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ಹಲವು ಗಣ್ಯರು ಹಾಜರಾಗಿದ್ದರು. ಈ ಸಂಬಂಧ ವಿವರಣೆ ನೀಡುವಂತೆ ಮಹಿಳಾ ಆಯೋಗ ಡಿಜಿಪಿ ಅವರಿಗೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.