ಭಾರತೀಯ ನೌಕಾಪಡೆ ಬತ್ತಳಿಕೆಗೆ ಸ್ವದೇಶಿ ನಿರ್ಮಿತ ಟೋರ್ಪಿಡೋ 'ವರುಣಾಸ್ತ್ರ' ಸೇರ್ಪಡೆ
ಕಳೆದ ಗಣರಾಜ್ಯೋತ್ಸವದಂದು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದ ಸ್ವದೇಶಿ ನಿರ್ಮಿತ ಟೋರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆ ಮಾಡಲಾಗಿದೆ.

ನವದೆಹಲಿ: ಕಳೆದ ಗಣರಾಜ್ಯೋತ್ಸವದಂದು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದ್ದ ಸ್ವದೇಶಿ ನಿರ್ಮಿತ ಟೋರ್ಪಿಡೊ ವರುಣಾಸ್ತ್ರವನ್ನು ಭಾರತೀಯ ನೌಕಾಪಡೆಗೆ ಇಂದು ಸೇರ್ಪಡೆ ಮಾಡಲಾಗಿದೆ.
ಡಿಆರ್ಡಿಒ ದ ನೆವಲ್ ಸೈನ್ಸ್ ಆ್ಯಮಡ್ ಟೆಕ್ನಾಲಜಿಕಲ್ ಲ್ಯಾಬೋರೇಟರಿಯಲ್ಲಿ ಟೋರ್ಪಿಡೊ ವರುಣಾಸ್ತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭಾರತೀಯ ನೌಕಾದಳಕ್ಕೆ ಹಸ್ತಾಂತರಿಸಿದರು.
ಟೋರ್ಪಿಡೊ ವರುಣಾಸ್ತ್ರ ಒಟ್ಟು 1.25 ಟನ್ ತೂಕವಿದ್ದು, 250 ಕೆಜಿ ತೂಕದ ಸ್ಫೋಟಕಗಳನ್ನು ಗಂಟೆಗೆ 40 ನಾಟಿಕಲ್ ಮೈಲ್ ವೇಗದಲ್ಲಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


