ಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ
ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸಿಲುಕಿ ಅನಹ೯ತೆ ಭೀತಿ ಎದುರಿಸುತ್ತಿದ್ದ ಆಪ್ ಶಾಸಕರ ರಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದ್ದ ದೆಹಲಿ ಸರ್ಕಾರದ "ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.

ನವದೆಹಲಿ: ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸಿಲುಕಿ ಅನಹ೯ತೆ ಭೀತಿ ಎದುರಿಸುತ್ತಿದ್ದ ಆಪ್ ಶಾಸಕರ ರಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದ್ದ ದೆಹಲಿ ಸರ್ಕಾರದ "ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.
ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿಡುವ ದೆಹಲಿ ಸರ್ಕಾರದ ಮಸೂದೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದು, ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ತೀವ್ರ ಮುಖಭಂಗವಾಗಿದೆ. ದೆಹಲಿ ಸಕಾ೯ರ ರೂಪಿಸಿರುವ "ಸ೦ಸದೀಯ ಕಾರ್ಯದಶಿ೯ ಮಸೂದೆ'ಯನ್ನು ರಾಷ್ಟ್ರಪತಿ ಪ್ರಣಬ್ ಮುಖಜಿ೯ ಸೋಮವಾರ ತಿರಸ್ಕರಿಸಿದ್ದು, ಈ ವಿಚಾರವನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಿದ್ದಾರೆ. ಅಲ್ಲದೆ ಶಾಸಕರ ಪ್ರತಿಕ್ರಿಯೆ ಕೇಳುವಂತೆ ಪ್ರಣಬ್ ಸಲಹೆ ಮಾಡಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ನಿರ್ಧಾರದಿಂದಾಗಿ ಇದೀಗ ಆಮ್ ಆದ್ಮಿ ಪಕ್ಷದ 21 ಶಾಸಕರಿಗೆ ಮತ್ತೆ ಅನಹ೯ತೆ ಭೀತಿ ಎದುರಾಗಿದೆ.
ಏನಿದು ಪ್ರಕರಣ?
ದೆಹಲಿ ಸಕಾ೯ರ 21 ಶಾಸಕರಿಗೆ ಸ೦ಸದೀಯ ಕಾಯ೯ದಶಿ೯ ಹುದ್ದೆ ನೀಡಿದ್ದರ ವಿರುದ್ಧ ವ್ಯಾಪಕ ಆಕ್ಷೇಪ ಕೇಳಿಬ೦ದಿತ್ತು. ಸಂಸದೀಯ ಕಾರ್ಯದರ್ಶಿಯಂತಹ ಲಾಭದಾಯಕ ಹುದ್ದೆ (ಪ್ರತ್ಯೇಕ ಸಂಬಳ, ಭತ್ಯೆ ಇತ್ಯಾದಿ)ಗೆ ಶಾಸಕರನ್ನು ನೇಮಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಸರಕಾರದ ಕ್ರಮ ಸಂವಿಧಾನಕ್ಕೆ ವಿರುದ್ಧ. ಈ ಶಾಸಕರನ್ನು ಅನರ್ಹಗೊಳಿಸಿ ಎಂದು ರಾಷ್ಟ್ರಪತಿಯವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿತ್ತು. ಇದನ್ನು ತಡೆಯುವ ಸಲುವಾಗಿ ಹೊಸ ಮಸೂದೆ ರಚಿಸಿದ್ದ ದೆಹಲಿ ಸಕಾ೯ರ ಕಳೆದ ವಷ೯ ಜೂನ್‍ನಲ್ಲಿ ವಿಧಾನಸಭೆಯಲ್ಲಿ ಮ೦ಡಿಸಿತ್ತು. 1997ರ ದೆಹಲಿ ವಿಧಾನಸಭಾ ಕಾಯ್ದೆ (ಅನರ್ಹತೆ)ಗೆ ತಿದ್ದುಪಡಿ ತಂದು ಸಂಸದೀಯ ಕಾರ್ಯದರ್ಶಿ ಸ್ಥಾನವನ್ನು ಲಾಭದಾಯಕ ಹುದ್ದೆಯಿಂದ ಹೊರಗಿರಿಸಿತ್ತು. ಇದಕ್ಕೆ ದೆಹಲಿ ವಿಧಾನಸಭೆಯ ಅನುಮೋದನೆಯೂ ದೊರೆತಿತ್ತು. ಬಳಿಕ ರಾಷ್ಟ್ರಪತಿಯವರ ಅನುಮೋದನೆಗೆ ಕಳಿಸಲಾಗಿತ್ತು.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೆಹಲಿಯ ವಕೀಲರೊಬ್ಬರು ರಾಷ್ಟ್ರಪತಿ ಭವನಕ್ಕೆ ದೂರು ನೀಡಿದ್ದರು. ಈ ನಡುವೆ ನಿನ್ನೆ ಈ ವಿವಾದಿತ ಮಸೂದೆಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿರಾಕರಿಸಿದ್ದಾರೆ. ಪ್ರಣಬ್ ಮುಖರ್ಜಿ ಅವರ ನಡೆಯಿಂದಾಗಿ ಆಮ್ ಆದ್ಮಿ (ಆಪ್) ಪಕ್ಷದ 21 ಶಾಸಕರಿಗೆ ಅನರ್ಹತೆ ಭೀತಿ ಎದುರಾಗಿದೆ. ಒಂದು ವೇಳೆ ಆಪ್ ನ 21 ಶಾಸಕರು ಅನರ್ಹರಾದರೆ ಆಪ್ ಶಾಸಕರ ಸಂಖ್ಯೆ 46ಕ್ಕಿಳಿಯಲಿದೆ. ಆದರೆ ಬಹುಮತಕ್ಕೆ 36 ಶಾಸಕರು ಸಾಕಾದ ಕಾರಣ, ಸರಕಾರಕ್ಕೆ ಪತನದ ಭೀತಿ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


