ರಾಜಸ್ತಾನ ಸೈನಿಕರಿಗೆ ಸಿಹಿಸುದ್ದಿ: ರಣಬಿಸಿಲು ತಡೆಯಲು ಕೂಲ್ ಜಾಕೆಟ್
ರಾಜಸ್ತಾನ ನೀರ ಯೋಧರಿಗೆ ರಣಬಿಸಿಲ ಝಳದಿಂದ ರಕ್ಷಣೆ ಒದಗಿಸುವ ಹೊಸ ಬಗೆಯ 'ಪಿಸಿಎಂ ಕೂಲ್ ಜಾಕೆಟ್'ಗಳು ಸದ್ಯದಲ್ಲೇ ತಯಾರಾಗಲಿವೆ....

ಜೈಸಲ್ಮೇರ್: ರಾಜಸ್ತಾನ ನೀರ ಯೋಧರಿಗೆ ರಣಬಿಸಿಲ ಝಳದಿಂದ ರಕ್ಷಣೆ ಒದಗಿಸುವ ಹೊಸ ಬಗೆಯ 'ಪಿಸಿಎಂ ಕೂಲ್ ಜಾಕೆಟ್'ಗಳು ಸದ್ಯದಲ್ಲೇ ತಯಾರಾಗಲಿವೆ.
ಪಿಸಿಎಂ ಕೂಲ್ ಜಾಕೆಟ್ ಎಂದರೆ, ಫ್ಹೇಸ್ ಜೇಂಜ್ ಮೆಟೀರಿಯಲ್ಸ್ ರಕ್ಷಾ ಕವಚ ಎಂದರ್ಥ. 50-55 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೂ ಯೋಧರ ದೇಹಸ್ಥಿತಿಯನ್ನು ಸುಮಾರು 4 ಗಂಟೆಗಳ ಕಾಲ ತಂಪಾಗಿಸುವಲ್ಲಿ ಇದು ನೆರವಾಗಲಿದೆ.
ರಾಜಸ್ಥಾನದುದ್ದಕ್ಕೂ ಹಾದುಹೋಗುವ ಭಾರತ-ಪಾಕ್ ಗಡಿಯಲ್ಲಿ ಸರಾಸರಿ ಉಷ್ಣಾಂಶ 50ರಿಂದ 54 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇನ್ನು ಬೇಸಿಗೆಯಲ್ಲಂತೂ ವಿಪರೀತ ಬಿಸಿಗಾಳಿ ಇರುತ್ತದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಗಡಿ ಭದ್ರತಾ ಪಡೆಯ ಯೋಧರು ಹಾಗೂ ಅವರು ಬಳಸುವ ಒಂಟೆಗಳು ಪಡುವ ಪಾಡು ಅಷ್ಟಿಷ್ಟಲ್ಲ. ಹೀಗಾಗಿ ಅವರಿಗೆ ಕೂಲ್ ಜಾಕೆಟ್ ನೀಡಲು ರಾಜಸ್ತಾನ ಸರ್ಕಾರ ನಿರ್ಧರಿಸಿದೆ.
ದಿನವಿಡೀ ಸೂರ್ಯಶಾಖಕ್ಕೆ ಮೈಯೊಡ್ಡಿ ನಿಲ್ಲುವ ಯೋಧರಿಗೆ ಉರಿ ಮೂತ್ರ, ಚರ್ಮದ ಸೋಂಕು ಸೇರಿದಂತೆ ಅನೇಕ ಬಗೆಯ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುತ್ತಿವೆ. ಇನ್ಮುಂದೆ ಇವೆಲ್ಲವನ್ನೂ ತಡೆಯುವಲ್ಲಿ ಜಾಕೆಟ್‌ಗಳು ರಾಮಬಾಣದಂತೆ ಕಾರ್ಯನಿರ್ವಹಿಸಲಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಈ ಹಿಂದೆಯೇ ಇಂತಹ ಕೂಲ್ ಜಾಕೆಟ್‌ಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಿತ್ತು. ಈಗ ಅದೇ ತಂತ್ರಜ್ಞಾನವನ್ನು ಉನ್ನತೀಕರಿಸಿ, ವಿಷಮ ಪರಿಸ್ಥಿತಿಯಲ್ಲೂ ದೇಹವನ್ನು ತಂಪಾಗಿಡುವ ಈ ರಕ್ಷಾ ಕವಚವನ್ನು ಪ್ರಾಯೋಗಿಕವಾಗಿ ಜೈಸಲ್ಮೇರ್‌ನ ಶಾಗಢ ಬುಲ್ಜೆ ಮರಭೂಮಿಯ ಗಡಿಯಲ್ಲಿ ಕಾರ‍್ಯನಿರ್ವಹಿಸುತ್ತಿರುವ ಯೋಧರಿಗೆ ನೀಡಲಾಗಿದೆ. ಬಿಎಸ್‌ಎಫ್ ವೈದ್ಯರ ತಂಡವು ಇದರ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಿದೆ.
ಈಗ ಖಾಸಗಿ ಕಂಪನಿಯೊಂದು ಕೂಲ್ ಜಾಕೆಟ್ ಗಳ ತಯಾರಿಕೆ ನಡೆಸುತ್ತಿದ್ದು ಯೋಧರು ದಿನನಿತ್ಯ ಧರಿಸುವ ಸಮವಸ್ತ್ರದ ಮೇಲೆ ಈ ಕೂಲ್ ಜಾಕೆಟ್ ಧರಿಸಬಹುದಾಗಿದೆ. ಇದರಿಂದ ದೇಹದ ಉಷ್ಣಾಂಶ ಸಮತೋಲನವಾಗುತ್ತದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


