ಬಿಎಸ್ ಎಫ್ ಯೋಧರು

ನಕ್ಸಲರು ಅಡಗಿಸಿಟ್ಟ ಕಚ್ಚಾ ಬಾಂಬ್ ಸ್ಫೋಟಿಸಿ ಇಬ್ಬರು ಯೋಧರಿಗೆ ಗಾಯ
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟ ಕಚ್ಚಾ ಬಾಂಬ್ ಸ್ಫೋಟಿಸಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಮೂವರು ಗಾಯಗೊಂಡಿದ್ದರು.

ಮಣಿಪುರ: ಬಿಎಸ್‌ಎಫ್ ಯೋಧರ ಮೇಲೆ ಉದ್ರಿಕ್ತ ಗುಂಪಿನಿಂದ ಗುಂಡಿನ ದಾಳಿ; ಇಬ್ಬರು ಕಮಾಂಡೋಗಳು ಸಾವು!
ಈಶಾನ್ಯ ರಾಜ್ಯ ಮಣಿಪುರದ ತೌಬಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಮೇಲೆ ಬಂದೂಕುಧಾರಿಗಳು ಗುಂಡು ಹಾರಿಸಿದ ನಂತರ ಮೂವರು ಬಿಎಸ್‌ಎಫ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸ್ವಾತಂತ್ರೋತ್ಸವ: ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ ಎಫ್, ಪಾಕ್ ರೆಂಜರ್ಸ್ ನಡುವೆ ಪರಸ್ಪರ ಸಿಹಿ ವಿನಿಮಯ
ಸ್ವಾತಂತ್ರೋತ್ಸವ ಅಂಗವಾಗಿ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಅಠಾರಿ- ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನದ ರೆಂಜರ್ಸ್ ಗಳು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.

ತ್ರಿಪುರ ಗಡಿಯಲ್ಲಿ ಸಂಬಂಧಿಗಳ ಘರ್ಷಣೆ: ಇಬ್ಬರು ಬಿಎಸ್ ಎಫ್ ಯೋಧರು ಸಾವು; ಪೋಸ್ಟ್ ಕಮಾಂಡರ್ ಗೆ ಗಾಯ
ತ್ರಿಪುರ ಬಳಿ ಬಾಂಗ್ಲಾ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಸಂಬಂಧಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಬಿಎಸ್ ಎಫ್ ಯೋಧರು ಹುತಾತ್ಮರಾಗಿದ್ದರು, ಹಿರಿಯ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಛತ್ತೀಸ್ ಗಢ: 14 ಗಡಿ ಭದ್ರತಾ ಪಡೆ ಯೋಧರಿಗೆ ಕ್ವಾರಂಟೈನ್!
ಆಗ್ರಾದಿಂದ ಹಿಂತಿರುಗಿದ ನಂತರ ಕೊರೋನಾವೈರಸ್ ಶಂಕೆ ಮೇಲೆ ಛತ್ತೀಸ್ ಗಢದ 14 ಗಡಿ ಭದ್ರತಾ ಪಡೆ ಯೋಧರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರ ಅಂತಿಮ ಪರೀಕ್ಷೆ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಘಾ ಗಡಿಯಲ್ಲಿ ಬಿಎಸ್ ಎಫ್ ಯೋಧರಿಗೆ ರಾಕಿ ಕಟ್ಟಿ ರಕ್ಷಾ ಬಂಧನ್ ಆಚರಿಸಿದ ಮಹಿಳೆಯರು
ಅಟ್ಟಾರಿ- ವಾಘಾ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ.

ಮತ್ತೆ ಉದ್ಧಟತನ ತೋರಿದ ಪಾಕ್ ಗೆ ತಕ್ಕಪಾಠ, ವಾಯುಗಡಿ ಉಲ್ಲಂಘಿಸಿದ ಪಾಕ್ ಡ್ರೋಣ್ ಧ್ವಂಸ
ಗಡಿಯಲ್ಲಿ ಮತ್ತೆ ಪಾಕಿಸ್ತಾನ ಉದ್ಧಟತನ ತೋರಿದ್ದು, ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ ವಾಯುಗಡಿ ಉಲ್ಲಂಘಿಸಿದ ಪಾಕಿಸ್ತಾನದ ಡ್ರೋಣ್ ಅನ್ನು ಹೊಡೆದುರುಳಿಸಿದೆ.

ರಾಜಸ್ತಾನ ಸೈನಿಕರಿಗೆ ಸಿಹಿಸುದ್ದಿ: ರಣಬಿಸಿಲು ತಡೆಯಲು ಕೂಲ್ ಜಾಕೆಟ್
ರಾಜಸ್ತಾನ ನೀರ ಯೋಧರಿಗೆ ರಣಬಿಸಿಲ ಝಳದಿಂದ ರಕ್ಷಣೆ ಒದಗಿಸುವ ಹೊಸ ಬಗೆಯ 'ಪಿಸಿಎಂ ಕೂಲ್ ಜಾಕೆಟ್'ಗಳು ಸದ್ಯದಲ್ಲೇ ತಯಾರಾಗಲಿವೆ....

ಗಡಿ ದಾಟಲು ಉಗ್ರರ ಯತ್ನ: ಬಿಎಸ್ ಎಫ್ ಯೋಧರಿಂದ ಪ್ರತಿ ದಾಳಿ
ಪಾಕಿಸ್ತಾನ ಗಡಿಯಿಂದ ಭಾರತೀಯ ಗಡಿಯೊಳಗೆ ಒಳನುಸುಳಲು ಯತ್ನಿಸಿದ ಉಗ್ರರು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದು...

