ದೇಶ

ಮಥುರಾ ಘರ್ಷಣೆ ಮಾಸ್ಟರ್ ಮೈಂಡ್ ರಾಮ್ ವೃಕ್ಷ್ ಯಾದವ್ ಸಾವು: ಪೊಲೀಸ್ ವರದಿ

ಉತ್ತರಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತವರಿ ತೆರವು ಕಾರ್ಯಾಚರಣೆ ವೇಳೆ ನಡೆದ 24 ಜನರ ಸಾವಿಗೆ ಕಾರಣವಾದ ಭೀಕರ ಹಿಂಸಾಚಾರ ಘಟನೆಯ ಮಾಸ್ಟರ್ ಮೈಂಡ್ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಥುರಾ ಘರ್ಷಣೆ ಮಾಸ್ಟರ್ ಮೈಂಡ್ ರಾಮ್ ವೃಕ್ಷ್ ಯಾದವ್ ಸಾವು: ಪೊಲೀಸ್ ವರದಿ
ಮಥುರಾ ಗಲಭೆ ಮತ್ತು ರಾಮ ವೃಕ್ಷ್ ಯಾದವ್ (ಸಂಗ್ರಹ ಚಿತ್ರ)
Published On :

ಮಥುರಾ: ಉತ್ತರಪ್ರದೇಶದ ಮಥುರಾದಲ್ಲಿ ಅಕ್ರಮ ಭೂ ಒತ್ತವರಿ ತೆರವು ಕಾರ್ಯಾಚರಣೆ ವೇಳೆ ನಡೆದ 27 ಜನರ ಸಾವಿಗೆ ಕಾರಣವಾದ ಭೀಕರ ಹಿಂಸಾಚಾರ ಘಟನೆಯ ಮಾಸ್ಟರ್ ಮೈಂಡ್ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ವರೆಗೂ ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಮುಖ್ಯಸ್ಥ ರಾಮ್ ವೃಕ್ಷ್ ಯಾದವ್ ತಲೆಮರೆಸಿಕೊಂಡಿದ್ದಾನೆ ಹೇಳಲಾಗುತ್ತಿತ್ತಾದರೂ, ದುರಂತ ನಡೆದ ಸ್ಥಳದಲ್ಲಿ ದೊರೆತ ಕೆಲ  ಶವಗಳ ಪೈಕಿ ಒಂದು ಶವ ರಾಮ್ ವೃಕ್ಷ್ ಯಾದವ್ ನನ್ನು ಹೋಲುತ್ತಿತ್ತು. ಅನುಮಾದಿಂದ ಪರೀಕ್ಷೆ ನಡೆಸಿದ ಪೊಲೀಸರಿಗೆ ಅದು ರಾಮ್ ವೃಕ್ಷ್ ಯಾದವ್ ನದ್ದೇ ಎಂದು ಖಚಿತವಾಗಿದೆ. ಆ  ಬಳಿಕವೇ ಪೊಲೀಸರು ಶನಿವಾರ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಗುರುವಾರ ಸಂಭವಿಸಿದ ಗಲಭೆಯಲ್ಲಿ ಹಲವರ ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮೃತರ ಪತ್ತೆ ಕಷ್ಟಸಾಧ್ಯವಾಗಿತ್ತು. ನೇತಾಜಿ ಸುಭಾಷ್ ಚಂದ್ರ  ಬೋಸ್​ರ ಅನುಯಾಯಿ ಎಂದು ಹೇಳಿಕೊಳ್ಳುತ್ತಿದ್ದ ಯಾದವ್, ಸ್ವಾಧೀನ ಭಾರತ್ ವಿಧಿಕ್ ಸತ್ಯಾಗ್ರಹ ಸಂಘಟನೆ ಕಟ್ಟಿಕೊಂಡು, ಮಥುರಾದಲ್ಲಿನ ಜವಾಹರ್ ಭಾಗ್ ಪಾರ್ಕ್  ಅತಿಕ್ರಮಿಸಿಕೊಂಡಿದ್ದ.

ಶವ ಗುರ್ತಿಸುವುದೇ ಸಮಸ್ಯೆ
ನಾನೇ ನೇತಾಜಿ ಬೋಸ್ ಎಂದಿದ್ದ "ಜೈ ಗುರುದೇವ್"!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.