ದೇಶ

ಅಮೆರಿಕಾಗೆ ಡೊನಾಲ್ಡ್ ಟ್ರಂಪ್ ತ್ಯಾಗ ಶೂನ್ಯ: ಪಾಕ್ ಮೂಲದ ಅಮೆರಿಕ ಯೋಧನ ತಂದೆ

2001 ರ ಇರಾಕ್ ಯುದ್ಧದಲ್ಲಿ ಹತ್ಯೆಗೀಡಾಗಿದ್ದ ಪಾಕಿಸ್ತಾನ ಮೂಲದ ಅಮೆರಿಕ ಯೋಧನ ತಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದಿದ್ದು...

ಅಮೆರಿಕಾಗೆ ಡೊನಾಲ್ಡ್ ಟ್ರಂಪ್ ತ್ಯಾಗ ಶೂನ್ಯ: ಪಾಕ್ ಮೂಲದ ಅಮೆರಿಕ ಯೋಧನ ತಂದೆ
ಡೊನಾಲ್ಡ್ ಟ್ರಂಪ್
Published On :

ಫಿಲಡೆಲ್ಫಿಯಾ: 2001 ರ ಇರಾಕ್ ಯುದ್ಧದಲ್ಲಿ ಹತ್ಯೆಗೀಡಾಗಿದ್ದ ಪಾಕಿಸ್ತಾನ ಮೂಲದ ಅಮೆರಿಕ ಯೋಧನ ತಂದೆ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದಿದ್ದು ದೇಶಕ್ಕಾಗಿ ಡೊನಾಲ್ಡ್ ಟ್ರಂಪ್  ಏನನ್ನೂ ತ್ಯಾಗ ಮಾಡಿಲ್ಲ ಎಂದು ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್, ಅಲ್ಪಸಂಖ್ಯಾತರನ್ನು ಅವಮಾನ ಮಾಡುತ್ತಿದ್ದು ಬೇಧ ಭಾವ ತೋರುತ್ತಿದ್ದಾರೆ ಎಂದು ಅಮೆರಿಕದ ಯೋಧ ಹುಮಾಯೂನ್ ಖಾನ್ ತಂದೆ ಖಿಜ್ರ್ ಖಾನ್ ಆರೋಪಿಸಿದ್ದು, ದೇಶದ ಜನತೆ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಗೆ ಮತ ಹಾಕಬೇಕು ಎಂದು ಕರೆ ನೀಡಿದ್ದಾರೆ. ಡೆಮಾಕ್ರೆಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಖಿಜ್ರ್ ಖಾನ್, " ಡೊನಾಲ್ದ್ ಟ್ರಂಪ್ ನೀವು ದೇಶಕ್ಕಾಗಿ ಏನನ್ನೂ ತ್ಯಾಗ ಮಾಡಿಲ್ಲ, ಈ ಚುನಾವಣೆಯನ್ನು ಲಘುವಾಗಿ ಪರಿಗಣಿಸಬೇಡಿ, ಇದು ಐತಿಹಾಸಿಕ ಚುನಾವಣೆ, ಯುದ್ಧದಲ್ಲಿ ಮಡಿದ ನನ್ನ ಮಗನನ್ನು ಗೌರವಿಸಲು ನಿಮ್ಮಲ್ಲಿ ಮನವಿ ಮಾಡುತ್ತೇನೆ" ಎಂದು ಹೇಳಿದ್ದಾರೆ.

ಅಮೆರಿಕದ ಬೇರೆ ಅಲ್ಪಸಂಖ್ಯಾತರನ್ನು ಡೊನಾಲ್ಡ್ ಟ್ರಂಪ್ ಅಗೌರವಿಸುತ್ತಾರೆ. ಅದು ಮಹಿಳೆಯರಿರಬಹುದು, ನ್ಯಾಯಾಧೀಶರಿರಬಹುದು, ಅಥವಾ ಅವರ ಪಕ್ಷದ ನಾಯಕರೇ ಆಗಿರಬಹುದು ಅಲ್ಪಸಂಖ್ಯಾತರನ್ನು ವಿರೋಧಿಸುವ ಡೊನಾಲ್ಡ್ ಟ್ರಂಪ್ ನಮ್ಮನ್ನು ದೇಶದಿಂದ ನಿಷೇಧಿಸುವ ಪ್ರತಿಜ್ಞೆ ಮಾಡಿದ್ದಾರೆ ಎಂದು ಖಿಜ್ರ್ ಖಾನ್ ಆರೋಪಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರು ದೇಶದ ಜನರು ಉತ್ತಮ ಭವಿಷ್ಯಕ್ಕಾಗಿ ತಮ್ಮನ್ನು ನಂಬುವಂತೆ ಮನವಿ ಮಾಡಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಈ ದೇಶದ ಸಂವಿಧಾನವನ್ನು ಓದಿದ್ದಾರಾ? ಇಲ್ಲ ಎಂದರೆ ನನ್ನ ಬಳಿ ಇರುವ ಪ್ರತಿಯನ್ನು ಕಲಿಸಿಕೊಡುತ್ತೇನೆ, ಇದರಲ್ಲಿ  ಸ್ವಾತಂತ್ರ್ಯ ಹಾಗೂ ಸಮಾನ ರಕ್ಷಣೆಯ ಅಂಶಗಳನ್ನು ಅರಿಯಲಿ ಎಂದು ಖಾನ್ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.