ಹಿಂದುಗಳು ಪೂಜಿಸುವ 'ಗೋವು' ರಕ್ಷಿಸಿ: ಮುಸ್ಲಿಂರಿಗೆ ಅಜ್ಮೀರ್ ದರ್ಗಾ ಧಾರ್ಮಿಕ ಮುಖಂಡನಿಂದ ಕರೆ
ಹಿಂದೂಗಳು ಪೂಜಿಲ್ಪಡುವ ಗೋವುಗಳನ್ನು ರಕ್ಷಿಸಬೇಕು ಎಂದು ಮುಸ್ಲಿಂರಿಗೆ ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಮನವಿ ಮಾಡಿದ್ದಾರೆ...

ಜೈಪುರ: ಹಿಂದೂಗಳು ಪೂಜಿಲ್ಪಡುವ ಗೋವುಗಳನ್ನು ರಕ್ಷಿಸಬೇಕು ಎಂದು ಮುಸ್ಲಿಂರಿಗೆ ಅಜ್ಮೀರ್ ದರ್ಗಾದ ಮುಖ್ಯಸ್ಥ ಜೈನುಲ್ ಅಬೆದಿನ್ ಅಲಿ ಖಾನ್ ಮನವಿ ಮಾಡಿದ್ದಾರೆ.
ಗೋಮಾಂಸ ವಿಷಯವನ್ನೇ ಇಟ್ಟುಕೊಂಡು ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಿಂದು-ಮುಸ್ಲಿಂರ ನಡುವಿನ ಸೌಹಾರ್ದತೆಯನ್ನು ಕದಡುತ್ತಿದ್ದಾರೆ. ಹೀಗಾಗಿ ದೇಶದ ಹಿತಾಸಕ್ತಿಗಾಗಿ ಮುಸ್ಲಿಂರು ಗೋವುಗಳನ್ನು ರಕ್ಷಿಸುವ ಮೂಲಕ ಅದನ್ನು ಮಾದರಿಯಾಗಿ ತೋರಿಸಬೇಕು ಎಂದರು.
ಗೋವು ಹಿಂದುಗಳಿಗೆ ಪವಿತ್ರವಾಗಿದೆ. ಆದರೆ ಗೋಮಾಂಸ ಭಕ್ಷಣೆ ಈಗ ಧರ್ಮದ ಹೊಸ ಅಸ್ತ್ರವಾಗಿ ಬಳಕೆಯಾಗುತ್ತಿದ್ದು, ಇದು ದೇಶದ ಘನತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಇತಿಹಾಸದಲ್ಲಿ ಪ್ರವಾದಿ ಮೊಹಮ್ಮದರು ಕೂಡಾ ಗೋ ಮಾಂಸ ಭಕ್ಷಣೆ ವಿರುದ್ಧ ಉಪದೇಶ ನೀಡಿದ್ದರು. ಇನ್ನು ಸೂಫಿ ಸಂತರು ಮತ್ತು ಧಾರ್ಮಿಕ ಮುಖಂಡರು ಗೋಮಾಂಸ ತಿನ್ನುತ್ತಿದ್ದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಜೈನುಲ್ ಅಬೆದಿನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


