ಅಚ್ಚರಿ: ಬೀದಿ ನಾಯಿ ಹಾಲು ಕುಡಿದು ಬೆಳೆದ ಬಾಲಕ!
2 ವರ್ಷದ ಬಾಲಕ ಬೀದಿ ನಾಯಿಯ ಬಳಿ ಹಾಲು ಕುಡಿದು ಬೆಳೆದಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ...

ಜಾರ್ಖಂಡ್ : 2 ವರ್ಷದ ಬಾಲಕ ಬೀದಿ ನಾಯಿಯ ಬಳಿ ಹಾಲು ಕುಡಿದು ಬೆಳೆದಿರುವ ಘಟನೆ ಜಾರ್ಖಂಡ್ ನಲ್ಲಿ ವರದಿಯಾಗಿದೆ,
ಮೋಹಿತ್ ಕುಮಾರ್ (10) ಎಂಬ ಬಾಲಕ ತನ್ನ ಎರಡನೇ ವಯಸ್ಸಿನಿಂದ ಬೀದಿನಾಯಿಗಳ ಸಹವಾಸ ಆರಂಭಿಸಿ ನಾಯಿಗಳ ಬಳಿ ಹಾಲು ಕುಡಿದು ಬೆಳೆದಿದ್ದಾನೆ. ಬೀದಿನಾಯಿಗಳ ಜತೆ ಆಟವಾಡುತ್ತ ಒಂದು ದಿನ ಇದ್ದಕ್ಕಿದ್ದಂತೆ ನಾಯಿ ಮೊಲೆಗೆ ಬಾಯಿ ಹಾಕಿ ಹಾಲು ಹೀರಿದ್ದಾನೆ. ಶ್ವಾನವೂ ಸುಮ್ಮನೆ ಹಾಲುಣಿಸಿದೆ. ಅಂದಿನಿಂದ ನಿತ್ಯವೂ ನಾಯಿ ಬಳಿ ಹಾಲು ಕುಡಿಯುತ್ತಲೇ ಬೆಳೆದಿದ್ದಾನೆ.
ಕೆಲ ದಿನಗಳ ನಂತರ ನೆರೆಹೊರೆಯವರಿಂದ ಸುದ್ದಿ ತಿಳಿದ ಈತನ ಪಾಲಕರು ಮನೆಯಿಂದ ಹೊರಬಿಡದೆ ಹವ್ಯಾಸ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅವಕಾಶ ಸಿಕ್ಕಾಗಲೆಲ್ಲ ಸೀದಾ ನಾಯಿಗಳೆಡೆಗೆ ತೆರಳುತ್ತಿದ್ದ ಮೋಹಿತ್ 10 ವರ್ಷದವನಾದರೂ ಈವರೆಗೂ ನಾಯಿ ಹಾಲು ಕುಡಿಯುವುದನ್ನು ಬಿಟ್ಟಿಲ್ಲ.
ಮೋಹಿತ್ ಕಳೆದ ವಾರ ಬೇರೆ ರಸ್ತೆಯ ನಾಯಿ ಹಾಲು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡಿದ್ದಾನೆ.ಈತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಲಸಿಕೆ ಹಾಕಿಸಲಾಗಿದೆ. ವೈದ್ಯರ ಪ್ರಕಾರ ನಾಯಿ ಹಾಲು ಮಾನವನಿಗೆ ಹಾನಿಕಾರಕವಲ್ಲ, ಆದರೆ ರೇಬಿಸ್ ಹರಡುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಿದ್ದಾರೆ. ಮೋಹಿತ್ ತಂದೆ ರಸ್ತೆ ಬದಿಯಲ್ಲಿ ಜ್ಯೂಸ್ ಮಾರುತ್ತಾರೆ. ತಾಯಿ ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


