ಗಲಭೆ ಪೀಡಿತ ಸೂಡಾನ್ ನಿಂದ 156 ಮಂದಿ ಭಾರತೀಯರು ವಾಪಸ್
ಗಲಭೆ ಪೀಡಿತ ಸೂಡಾನ್ ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ...

ತಿರುವನಂತಪುರ: ಗಲಭೆ ಪೀಡಿತ ಸೂಡಾನ್ ನಲ್ಲಿ ಸಿಲುಕಿದ್ದ 156 ಭಾರತೀಯರನ್ನು ಕೇಂದ್ರ ಸರ್ಕಾರ ಸಂಕಟ್ ಮೋಚನ್ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ.
ಕೇಂದ್ರ ವಿದೇಶಾಂಗ ರಾಜ್ಯಖಾತೆ ಸಚಿವ ವಿ.ಕೆ ಸಿಂಗ್ ನೇತೃತ್ವದಲ್ಲಿ 2ಸಿ-17 ಗ್ಲೋಬ್ ಮಾಸ್ಟರ್ ಮಿಲಿಟರಿ ಎರಡು ವಿಮಾನಗಳ ಮೂಲಕ 156 ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ.
156 ಭಾರತೀಯರ ಪೈಕಿ 85 ಮಂದಿ ಕೇರಳದ ತಿರುವನಂತಪುರ ಹಾಗೂ 71 ಮಂದಿ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ.
156 ಭಾರತೀಯರಲ್ಲಿ 46 ಕೇರಳಿಗರು, ನೇಪಾಳದ 2, 7 ಮಹಿಳೆಯರು ಹಾಗೂ 3 ಮಕ್ಕಳು ಸೇರಿದ್ದು, ಇನ್ನುಳಿದಂತೆ ದಕ್ಷಿಣ ಭಾರತದ ಮೂಲದವರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


