ದೇಶ

'ವಿಸ್ಕಿ ಕದ್ದು ಸಿಕ್ಕಿ ಬಿದ್ಲು ಏರ್ ಇಂಡಿಯಾ ಗಗನ ಸಖಿ'

ವಿಮಾನದಲ್ಲಿ ಸರ್ಕಾರಕ್ಕೆ ಸೇರಿದ್ದ ಹಲವು ವಸ್ತುಗಳನ್ನು ಕದ್ದ ಏರ್ ಇಂಡಿಯಾ ಗಗನ ಸಖಿ ಸಿಕ್ಕಿಬಿದ್ದಿದ್ದಾಳೆ.

'ವಿಸ್ಕಿ ಕದ್ದು ಸಿಕ್ಕಿ ಬಿದ್ಲು ಏರ್ ಇಂಡಿಯಾ ಗಗನ ಸಖಿ'
ಏರ್ ಇಂಡಿಯಾ ವಿಮಾನ
Published On :

ಚೆನ್ನೈ: ವಿಮಾನದಲ್ಲಿ ಸರ್ಕಾರಕ್ಕೆ ಸೇರಿದ್ದ ಹಲವು ವಸ್ತುಗಳನ್ನು ಕದ್ದ ಏರ್ ಇಂಡಿಯಾ ಗಗನ ಸಖಿ  ಸಿಕ್ಕಿಬಿದ್ದಿದ್ದಾಳೆ.

ತಾನು ಕಾರ್ಯನಿರ್ವಹಿಸುವ ವಿಮಾನದಲ್ಲೇ ಗ್ರಾಹಕರಿಗೆ ನೀಡಬೇಕಾಗಿದ್ದ ಊಟದ ಪ್ಯಾಕ್‌, ಕಾಫಿ ಬಾಕ್ಸ್‌ಗಳು, ಹಾಲಿನ್‌ ಕಾರ್ಟನ್‌ಗಳು, ವ್ಹಿಸ್ಕಿ ಬಾಟಲ್‌ಗ‌ಳು, ಹುರಿದ ಗೇರುಬೀಜದ ಪ್ಯಾಕುಗಳು, ಜ್ಯೂಸ್‌ ಪ್ಯಾಕೇಟ್‌ಗಳನ್ನು ಕದ್ದು ಬ್ಯಾಗಿನಲ್ಲಿ ಹಾಕಿಕೊಂಡು ಹೋಗುವಾಗ ತಪಾಸಣೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.

ಚೆನ್ನೈ - ಕೊಲಂಬೋ - ದೆಹಲಿಗೆ ಪ್ರಯಾಣ ಹಾಗೂ ಮರು ಪ್ರಯಾಣ ಮಾಡುವ ಅಂತಾರಾಷ್ಟ್ರೀಯ ಹಾರಾಟದ ವಿಮಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ವಿಮಾನದಲ್ಲಿ ಬಳಕೆಗಾಗಿ ಸಂಗ್ರಹಿಸಿಟ್ಟಿದ್ದ ನಿತ್ಯೋಪಯೋಗಿ ವಸ್ತುಗಳಲ್ಲಿ ಈಕೆ ತನ್ನ ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ತನ್ನ ಬ್ಯಾಗಿನಲ್ಲಿ ಇರಿಸಿಕೊಂಡಿದ್ದಳು.

ಕಳ್ಳತನದ ಬಗ್ಗೆ ಖಚಿತ ಮಾಹಿತಿ ಪಡೆದ ಕಸ್ಟಮ್ಸ್‌ ಮತ್ತು ವಿಜಿಲೆನ್ಸ್‌ ಅಧಿಕಾರಿಗಳು ಆಕೆಯ ಬ್ಯಾಗನ್ನು ತಪಾಸಣೆ ಮಾಡಿದಾಗ ಅದರೊಳಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಒದಗಿಸಲಾಗುವ ಅನೇಕ ಗ್ರಾಹಕ ಬಳಕೆಯ ವಸ್ತುಗಳು ಪತ್ತೆಯಾದವು. ತಪಾಸಣೆ ಮಾಡಿದ ಅಧಿಕಾರಿಗಳು ಒಡನೆಯೇ ಅವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.