ದೇಶ

ಶ್ರೀರಾಮನಿಗೆ ಪ್ರಧಾನಿ ಮೋದಿಯನ್ನು ಹೋಲಿಸಿದ ಬಾಲಿವುಡ್ ನಟ ಪರೇಶ್ ರಾವಲ್

ಹಿರಿಯ ಬಾಲಿವುಡ್ ನಟ ಪರೇಶ್ ರಾವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮನಿಗೆ ಹೋಲಿಕೆ...

ಶ್ರೀರಾಮನಿಗೆ ಪ್ರಧಾನಿ ಮೋದಿಯನ್ನು ಹೋಲಿಸಿದ ಬಾಲಿವುಡ್ ನಟ ಪರೇಶ್ ರಾವಲ್
ನರೇಂದ್ರ ಮೋದಿ-ಪರೇಶ್ ರಾವಲ್
Published On :
ಅಹ್ಬದಾಬಾದ್: ಹಿರಿಯ ಬಾಲಿವುಡ್ ನಟ ಪರೇಶ್ ರಾವಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ರೀರಾಮನಿಗೆ ಹೋಲಿಕೆ ಮಾಡಿದ್ದಾರೆ. 
ನಿರ್ಮಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮಚಂದ್ರನಂತೆ ಎಂದು ಹೇಳಿದ್ದಾರೆ.
ರಾಮಾಯಣದಲ್ಲಿ ಶ್ರೀರಾಮನ ಹೆಸರು ಬರೆದ ಕಲ್ಲುಗಳ ಹೇಗೆ ನೀರ ಮೇಲೆ ತೇಲಿತೋ ಅದೇ ರೀತಿ ನರೇಂದ್ರ ಮೋದಿ ಅವರ ಹೆಸರು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲುವು ತಂದುಕೊಟ್ಟಿತು ಎಂದು ಪರೇಶ್ ತಿಳಿಸಿದ್ದಾರೆ.
ಅಸಹಿಷ್ಣುತೆ ಬಗ್ಗೆ ಮಾತನಾಡಿದ ಅವರು, ಬಿಗಿ ಭದ್ರತೆ ಮತ್ತು ಬೆಲೆ ಬಾಳುವ ಕಾರುಗಳಲ್ಲಿ ಹೋರಾಡುವಂತವರೇ ಅಸಹಿಷ್ಣುತೆ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ ತಂದಿದೆ ಎಂದಿದ್ದಾರೆ.
ಅದೇ ಸಂದರ್ಭದಲ್ಲಿ, ಸಿನಿಮಾರಂಗದವರು ಲಾಬಿ ಮಾಡಿ ಪ್ರಶಸ್ತಿ ಗಿಟ್ಟಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.