ಇಸಿಸ್ ಉಗ್ರ ಸಂಘಟನೆ ದಮನಕ್ಕೆ ಸಜ್ಜಾಗುತ್ತಿದೆ ಹಿಂದೂ ಧರ್ಮಸೇನೆ
ಭಾರತದಲ್ಲಿ ಬೇರೂರಲು ಯತ್ನಿಸುತ್ತಿರುವ ಇಸಿಸ್ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ ಧರ್ಮ ಸೇನೆ ಸಜ್ಜುಗೊಳ್ಳುತ್ತಿದೆ.....

ನವದೆಹಲಿ: ಭಾರತದಲ್ಲಿ ಬೇರೂರಲು ಯತ್ನಿಸುತ್ತಿರುವ ಇಸಿಸ್ ಉಗ್ರ ಸಂಘಟನೆಯ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ ಧರ್ಮ ಸೇನೆ ಸಜ್ಜುಗೊಳ್ಳುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಹೊರವಲಯದಿಂದ ಹಿಡಿದು ಉತ್ತರಾಖಂಡ ಗಡಿಯವರೆಗಿನ ಪ್ರದೇಶದಲ್ಲಿ ಸಕ್ರಿಯವಾಗಿರುವ ಹಿಂದು ಸ್ವಾಭಿಮಾನ ಸಂಘಟನೆಯು "ಧರ್ಮ ಸೇನೆ'ಯನ್ನು ಸಿದ್ಧಪಡಿಸುತ್ತಿದ್ದು ಈಗಾಗಲೇ ಸುಮಾರು 15,000 ಮಂದಿ ಈ ಸೇನೆಯ ಸದಸ್ಯರಾಗಿದ್ದಾರೆ.
2020 ರೊಳಗಾಗಿ ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಗುರಿಯನ್ನು ಇಸಿಸ್ ಉಗ್ರ ಸಂಘಟನೆ ಹೊಂದಿರುವುದಾಗಿ ಈಗಾಗಲೇ ಬಹಿರಂಗವಾಗಿದ್ದು, ಇಸಿಸ್ ಸವಾಲನ್ನು ಸಮರ್ಥವಾಗಿ ಎದುರಿಸಲು ಹಿಂದು ಸ್ವಾಭಿಮಾನ್ ಸಂಘಟನೆಯು ಪಶ್ಚಿಮ ಉತ್ತರ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸಮರ ಕಲೆಯ ತರಬೇತಿ ಶಿಬಿರಗಳನ್ನು ಆರಂಭಿಸಿದೆ.
ಧರ್ಮ ಸೇನೆಯ ಸೈನಿಕರಾಗುವುದಕ್ಕೆ ವಿವಿಧ ಜಾತಿಗಳಿಗೆ ಸೇರಿದ ಮಹಿಳೆಯರು, ಪುರುಷರು ಮುಂದಾಗಿದ್ದಾರೆ. ಇವರನ್ನು ಮಾತ್ರವಲ್ಲದೆ ಎಂಟು ವರ್ಷ ಪ್ರಾಯದಷ್ಟು ಚಿಕ್ಕವರಿರುವ ಮಕ್ಕಳನ್ನೂ ಕೂಡ ಸೇನೆಗೆ ಸೇರಿಸಿಕೊಳ್ಳಲಾಗುತ್ತಿದೆ. ಧರ್ಮ ಸೈನಿಕರಿಗೆ ಕತ್ತಿ ವರಸೆ ಮಾತ್ರವಲ್ಲದೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ರೀತಿ ನೀತಿಗಳನ್ನು ಕೂಡ ಕಲಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


