ದೇಶ

ಶಬರಿಮಲೆ ವಿವಾದ: ಸುಪ್ರೀಂ ಮಧ್ಯಪ್ರವೇಶ ತಪ್ಪಿಸಬಹುದಿತ್ತು

ಶಬರಿಮಲೆ ದೇವಾಲಯದ ಸಂಪ್ರದಾಯದಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವುದನ್ನು ತಪ್ಪಿಸಬಹುದಿತ್ತು'' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ...

ಶಬರಿಮಲೆ ವಿವಾದ: ಸುಪ್ರೀಂ ಮಧ್ಯಪ್ರವೇಶ ತಪ್ಪಿಸಬಹುದಿತ್ತು
ಶಬರಿ ಮಲೆ ದೇವಾಲಯ (ಸಂಗ್ರಹ ಚಿತ್ರ)
Published On :

ನವದೆಹಲಿ: ``ಶಬರಿಮಲೆ ದೇವಾಲಯದ ಸಂಪ್ರದಾಯದಲ್ಲಿ ಸುಪ್ರೀಂ ಮಧ್ಯಪ್ರವೇಶಿಸುವುದನ್ನು ತಪ್ಪಿಸಬಹುದಿತ್ತು'' ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್  ಅಭಿಪ್ರಾಯಪಟ್ಟಿದ್ದಾರೆ.

ಶಬರಿಮಲೆ ಕುರಿತ ಇತ್ತೀಚೆಗಿನ ಸುಪ್ರೀಂ ಕೋರ್ಟ್ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿರುವ ರಾಜೀವ್, ``ನಾನು ಒಂದೇ ಒಂದು ಬಾರಿಯೂ ತಪ್ಪದೇ ಸತತ 22 ವರ್ಷಗಳ ಕಾಲ ವಾರ್ಷಿಕ  ಶಬರಿಮಲೆ ಯಾತ್ರೆ ನಡೆಸಿದ್ದೇನೆ. ದೀರ್ಘಕಾಲದಿಂದ ನಡೆದುಬಂದಿರುವ ಸಂಪ್ರದಾಯದಲ್ಲಿ ಹಸ್ತಕ್ಷೇಪ ಮಾಡುವ ಸುಪ್ರೀಂ ಕೋರ್ಟ್ ಯತ್ನವು ಆಕ್ಷೇಪಾರ್ಹ. ದೇವಸ್ಥಾನಗಳ ಸಂಸ್ಕೃತಿ,  ಆಧ್ಯಾತ್ಮಿಕತೆಯನ್ನು ನಾವೆಲ್ಲರೂ ರಕ್ಷಿಸಬೇಕು ಹಾಗೂ ಗೌರವಿಸಬೇಕು'' ಎಂದು ಹೇಳಿದ್ದಾರೆ.

ಜತೆಗೆ, ``ಕೆಲವೊಂದು ಸಂಪ್ರದಾಯ, ವಿಧಿವಿಧಾನಗಳಿಗೆ ಆಧುನಿಕ ರೀತಿಯ ವಿವರಣೆ ನೀಡಲು ಅಸಾಧ್ಯ. ಹಲವು ಹಿಂದೂಗಳು ಹಾಗೂ ಭಾರತೀಯರು ಅತ್ಯಂತ ಆಪ್ಯಾಯಮಾನವಾಗಿ  ಅನುಸರಿಸುತ್ತಿರುವಂತಹ ಸಂಪ್ರದಾಯಗಳು ಹಾಗೂ ಮೌಲ್ಯಗಳನ್ನು ಗೌರವಿಸಬೇಕಾದ್ದು ಎಲ್ಲರ ಕರ್ತವ್ಯ'' ಎಂದೂ ಹೇಳಿದ್ದಾರೆ ರಾಜೀವ್. ಇದೇ ವೇಳೆ, ದೇವಸ್ಥಾನಗಳ ನಿರ್ವಹಣೆಯ ಹೊಣೆಯಿಂದ ಕೇರಳ ಸರ್ಕಾರವನ್ನು ಹೊರಗಿಟ್ಟು, ಸ್ವಾಯತ್ತ ಭಕ್ತಾದಿಗಳೇ ನಿರ್ವಹಿಸುವ ಟ್ರಸ್ಟ್ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಇದು ಇಂದಿನ ಅಗತ್ಯ. ಆಡಳಿತದಲ್ಲಾಗುವ ಈ  ಬದಲಾವಣೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಭ್ರಷ್ಟಾಚಾರ ಮಾತ್ರ ಎಲ್ಲೂ ನಡೆಯಬಾರದು ಎಂದೂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.