ಶಾರುಖ್, ಅಮಿರ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆ ಕಡಿತ
ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆಯನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ...
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಮಿರ್ ಖಾನ್ ಮತ್ತು ಶಾರುಖ್ ಖಾನ್ ಸೇರಿ 40 ಸೆಲೆಬ್ರಿಟಿಗಳ ಭದ್ರತೆಯನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅಧಿಕಾರಿಗಳು, ಭದ್ರತಾ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸೆಲೆಬ್ರಿಟಿಗಳಿಗೆ ಭದ್ರತೆಗಳನ್ನು ನೀಡುವುದರಿಂದ ಮಾನವಬಲ (ಮ್ಯಾನ್ ಪವರ್) ಹಾಳಾಗುತ್ತಿದೆ. ಹೀಗಾಗಿ ಅಗತ್ಯಕ್ಕನುಗುಣವಾಗಿ ಅನಾವಶ್ಯಕ ಭದ್ರತೆಗಳನ್ನು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ವಾಡಿಕೆಯ ಕ್ರಮದಂತೆ ಈ ಬದಲಾವಣೆಗಳನ್ನು ಮಾಡಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಯಾರಿಗೆ ಬೆದರಿಕೆ ಪ್ರಮಾಣ ಕಡಿಮೆಯಾಗುತ್ತದೆಯೋ ಅವರ ಭದ್ರತೆಯನ್ನು ಕಡಿಮೆ ಮಾಡಲಾಗುತ್ತದೆ. ಇದರಂತೆ ಅಗತ್ಯಕ್ಕನುಗುಣವಾಗಿ ಭದ್ರತೆ ಹೆಚ್ಚು ಹಾಗೂ ಕಡಿಮೆ ಮಾಡುವುದರ ಕುರಿತಂತೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಅಸಹಿಷ್ಣುತೆ ಕುರಿತಂತೆ ಶಾರುಖ್ ಹಾಗೂ ಅಮಿರ್ ಖಾನ್ ಇಬ್ಬರು ನಾಯಕರು ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಸಿಲುಕಿದ್ದರು. ಇಬ್ಬರು ನಾಯಕರ ಹೇಳಿಕೆಗೆ ಹಲವು ವಿರೋಧಗಳು ವ್ಯಕ್ತವಾಗಿದ್ದವು. ಹೀಗಾಗಿ ಇಬ್ಬರು ನಾಯಕರಿಗೆ ಶಸ್ತ್ರಾಸ್ತ್ರ ಸಹಿತ ಸಿಬ್ಬದಿ ಹಾಗೂ ಭದ್ರತಾ ವಾಹನವನ್ನು ನೀಡಲಾಗಿತ್ತು.
ಇದೀಗ ಭದ್ರತೆ ಕುರಿತಂತೆ ನೂತನ ನಿರ್ದೇಶನ ಜಾರಿಯಾಗಿದ್ದು, ಇಬ್ಬರು ನಟರಿಗೂ ನೀಡಿರುವ ವಿಶೇಷ ಭದ್ರತಾ ಸೇವೆ ಕಡಿತಗೊಳಿಸಲಾಗಿದ್ದು, ಇನ್ನು ಮುಂದೆ ಬಂದೂಕು ದಾರಿ ಪೊಲೀಸರು ಎರಡು ಪಾಳಿಯಲ್ಲಿ ಭದ್ರತಾ ಸೇವೆಯನ್ನು ಮುಂದುವರೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನುಳಿದಂತೆ ವಿಧು ವಿನೋದ್ ಛೋಪ್ರಾ, ರಾಜ್ ಕುಮಾರ್ ಹಿರಾನಿ, ಫರಾಖಾನ್ ಮತ್ತು ಕರೀಂ ಮೊರಾನಿ ಸೇರಿದಂತೆ 40 ಸೆಲೆಬ್ರಿಟಿಗಳ ಭದ್ರತೆಗಳನ್ನು ಕಡಿತಗೊಳಿಸಲಾಗಿದ್ದು, ಇವರಿಗೂ ಇಬ್ಬರು ಪೇದೆಗಳನ್ನು ಭದ್ರತೆಯಾಗಿ ನೀಡಲಾಗಿದೆ.
ಅಕ್ಷಯ್ ಕುಮಾರ್, ಮಹೇಶ್ ಭಟ್ ಮತ್ತು ಮುಖೇಶ್ ಭಟ್, ಅಮಿತಾಬ್ ಬಚ್ಚನ್, ಲತಾ ಮಂಗೇಶ್ಕರ್. ದಿಲೀಪ್ ಕುಮಾರ್ ಅವರ ಭದ್ರತೆಯನ್ನು ಮುಂದುವರೆಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

