ಪಠಾಣ್ ಕೋಟ್ ದಾಳಿ: ಹನಿ ಟ್ರ್ಯಾಪ್ ಗೊಳಗಾಗಿದ್ದರು ಗುರುದಾಸ್ ಪುರ್ ಎಸ್ ಪಿ?
ಪಠಾಣ್ ಕೋಟ್ ದಾಳಿ ಸಂಬಂಧ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ನಿಂದ ಹನಿ ಟ್ರ್ಯಾಪ್ ಗೆ ...

ಪಠಾಣ್ ಕೋಟ್: ಪಠಾಣ್ ಕೋಟ್ ದಾಳಿ ಸಂಬಂಧ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಪೊಲೀಸ್ ಅಧಿಕಾರಿ ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ನಿಂದ ಹನಿ ಟ್ರ್ಯಾಪ್ ಗೆ ಒಳಗಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ತನಿಖೆ ನಡೆಯುತ್ತಿದ್ದು, ಸಲ್ವೀಂದರ್ ಸಿಂಗ್ ಪಾಕಿಸ್ತಾನದ ಐಎಸ್ ಐ ಹಾಗೂ ಜೈಶ್-ಇ ಮೊಹಮದ್ ಉಗ್ರ ಸಂಘಟನೆ ಜೊತೆ ನಂಟು ಹೊಂದಿರಬಹುದೆಂದು ಶಂಕಿಸಲಾಗಿದೆ.
ಎಸ್ ಪಿ ಸಲ್ವೀಂದರ್ ಸಿಂಗ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ರಾಷ್ಟ್ರೀಯ ತನಿಖಾ ತಂಡ, ಸಿಂಗ್ ಜೊತೆ ಅಪಹರಣಕ್ಕೊಳಗಾಗಿದ್ದ ಸಿಂಗ್ ಮನೆಯ ಅಡುಗೆ ಕೆಲಸದಾತ ಮದನ್ ಗೋಪಾಲ್ ಹಾಗೂ ಸ್ನೇಹಿತ ರಾಜೇಶ್ ವರ್ಮಾ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಪಠಾಣ್ ಕೋಟ್ ನಿಂದ 25 ಕಿ.ಮೀ ದೂರದಲ್ಲಿರುವ ಕೊಲಿಯಾ ಎಂಬ ಹಳ್ಳಿಯ ಬಳಿ ಬರುತ್ತಿದ್ದಾಗ ಶಸ್ತ್ರ ಸಜ್ಜಿತ ಉಗ್ರರು ತಮ್ಮನ್ನು ತಡೆದು , ತಮ್ಮ ಸ್ನೇಹಿತ ಹಾಗೂ ಅಡುಗೆ ಕೆಲಸದಾತನನ್ನು ಸೇರಿಸಿ ಕಿಡ್ನಾಪ್ ಮಾಡಿದ್ದರು ಎಂದು ಹೇಳಿಕೆ ನೀಡಿದ್ದರು.
ಸಲ್ವೀಂದರ್ ಸಿಂಗ್ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದು, ಪಠಾಣ್ ಕೋಟ್ ದಾಳಿಯಲ್ಲಿ ಅವರದ್ದು ನಿರ್ಣಾಯಕ ಪಾತ್ರವಿದ್ದು, ಭಯೋತ್ಪಾದಕರಿಗೆ ಬೆಂಬಲ ನೀಡಿದ್ದಾರೆ ಎಂದು ಖಾಸಗಿ ಚಾನೆಲ್ ವೊಂದು ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


