ದೇಶ

ರೈಲಿನ ಎಸಿ ಬೋಗಿಯಲ್ಲಿನ ಹೊದಿಕೆ ತೊಳೆಯುವುದು 2 ತಿಂಗಳಿಗೊಮ್ಮೆಯಂತೆ!

ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು...

ರೈಲಿನ ಎಸಿ ಬೋಗಿಯಲ್ಲಿನ ಹೊದಿಕೆ ತೊಳೆಯುವುದು  2 ತಿಂಗಳಿಗೊಮ್ಮೆಯಂತೆ!
ಸಾಂಕೇತಿಕ ಚಿತ್ರ
Published On :

ನವದೆಹಲಿ: ಮುಂದಿನ ಸಲ ನೀವು ರೈಲಿನ ಎಸಿ ಬೋಗಿಯಲ್ಲಿ ಪ್ರಯಾಣಿಸುವ ಆಲೋಚನೆಯಿದ್ದರೆ ಸ್ವಲ್ಪ ಯೋಚಿಸಿ, ನೀವು ಹೊದ್ದು ಮಲಗುವ ಹೊದಿಕೆಗಳನ್ನು ಎರಡು ತಿಂಗಳಿಗೊಮ್ಮೆ ತೊಳೆಯುವುದಂತೆ.

ಮೊನ್ನೆ ಗುರುವಾರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ರೈಲ್ವೆ ಬಜೆಟ್ ನಲ್ಲಿ ಸ್ವಚ್ಛತೆ ಕುರಿತು ಆದ್ಯತೆ ನೀಡಿದ್ದರು. ಆದರೆ ಮರುದಿನ ರೈಲ್ವೆ ಖಾತೆ ಸಹಾಯಕ ಸಚಿವ ಮನೋಜ್ ಸಿನ್ಹಾ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡುತ್ತಾ, ಎಸಿ ಬೋಗಿಗಳ ಬೆಡ್ ಶೀಟ್, ಬೆಡ್ ರೋಲ್ ಮತ್ತು ತಲೆದಿಂಬು ಕವರ್ ಗಳನ್ನು ಪ್ರತಿದಿನ ತೊಳೆಯಲಾಗುತ್ತದೆ, ಹೊದಿಕೆಗಳನ್ನು ಪ್ರತಿ ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಎಂದು ಹೇಳಿದ್ದರು. 

ರೈಲ್ವೆಗಳಲ್ಲಿ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ, ರಗ್ಗುಗಳ ಸ್ವಚ್ಛತೆ ಕಾಪಾಡುವಿಕೆ ಬಗ್ಗೆ ಅನೇಕ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೇಲಿನಂತೆ ವಿವರ ನೀಡಿದರು.

ಇದಕ್ಕೆ ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಕೂಡ ಕುಹಕವಾಡಿದರು. ಈ ಹಿಂದೆ ಎಸಿ ಬೋಗಿಯ ಪ್ರಯಾಣಿಕರು ಅವರೇ ಬೆಡ್ ಶೀಟ್, ತಲೆದಿಂಬು ಕವರ್, ಹೊದಿಕೆ ತರಬೇಕೆಂಬ ವ್ಯವಸ್ಥೆಯೇ ಚೆನ್ನಾಗಿತ್ತು ಅನ್ನಿಸುತ್ತದೆ ಎಂದರು, ಅದಕ್ಕೆ ಕಾಂಗ್ರೆಸ್ ಸಂಸದರೊಬ್ಬರು ಹಳೆ ವ್ಯವಸ್ಥೆಯನ್ನು ಮತ್ತೆ ತರಬಾರದೇಕೆ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಸಿನ್ಹಾ, ಇದು ಒಳ್ಳೆಯ ಸಲಹಯೇ. ಪ್ರಯಾಣಿಕರು ಮಲಗಲು ತಾವೇ ರಗ್ಗು, ಹೊದಿಕೆ ತಂದರೆ ಉತ್ತಮವೇ. ಇಲಾಖೆಯದ್ದೇನೂ ಸಮಸ್ಯೆಯಿಲ್ಲ ಎಂದು ಹೇಳಿದರು.

ಪ್ರಸ್ತುತ ರೈಲ್ವೆ ಇಲಾಖೆಯಡಿ 41 ಯಾಂತ್ರೀಕೃತ ಲಾಂಡ್ರಿಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತೆ 25 ಲಾಂಡ್ರಿಗಳಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸ್ವಚ್ಛತೆಯನ್ನು ಹೆಚ್ಚಿಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.