ಬರಗಾಲದಿಂದ ಕಂಗೆಟ್ಟ ರೈತನಿಗೆ ಸಂತಸ: ಈ ಬಾರಿ ಉತ್ತಮ ಮಳೆ ನಿರೀಕ್ಷೆ
ಎರಡು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದು ಸಂತೋಷದ ಸುದ್ದಿ. ಎರಡು ವರ್ಷಗಳ ಭೀಕರ ಬರಗಾಲಕ್ಕೆ ಕಾರಣವಾಗಿರುವ ಎಲ್ ನಿನೊ...

ನವದೆಹಲಿ: ಎರಡು ವರ್ಷಗಳ ಸತತ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಇದು ಸಂತೋಷದ ಸುದ್ದಿ. ಎರಡು ವರ್ಷಗಳ ಭೀಕರ ಬರಗಾಲಕ್ಕೆ ಕಾರಣವಾಗಿರುವ ಎಲ್ ನಿನೊ ಈ ಬಾರಿ ದೇಶಾದ್ಯಂತ ಉತ್ತಮ ಮಳೆ ಸುರಿಸಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಮುಂಗಾರಿನ ಬಗ್ಗೆ ನಿಖರವಾಗಿ ಅಂದಾಜು ಮಾಡಲು ಈಗ ಸಾಧ್ಯವಿಲ್ಲ. ಆದರೆ ಎರಡು ವರ್ಷಗಳಿಗಿಂತ ಅಧಿಕ ಮಳೆ ಈ ಬಾರಿಯ ಮುಂಗಾರಿನಲ್ಲಿ ಬೀಳಲಿದೆ ಎಂದು ತಜ್ಞರು ಹೇಳಿದ್ದಾರೆ.
ಕಳೆದ ವರ್ಷ ಮುಂಗಾರು ದುರ್ಬಲಗೊಳಿಸಿದ ಎಲ್ ನಿನೊ ಇದೀಗ ದುರ್ಬಲವಾಗುತ್ತಿದೆ. ಮುಂಗಾರು ಮಧ್ಯದ ವೇಳೆಗೆ ಇದರ ಪರಿಣಾಣ ತಟಸ್ಥವಾಗುವ ನಿರೀಕ್ಷೆ ಇದೆ. ಇದಕ್ಕೆ ಪರ್ಯಾಯವಾಗಿ ಎಲ್ ನಿನೊ ಗೆ ವಿರುದ್ಧವಾದ ಪರಿಸ್ಥಿತಿ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದು ಮುಂಗಾರಿಗೆ ಪೂರಕವಾಗಿದ್ದು, ಮಳೆಗಾಲ ಮುಗಿಯುವ ಮುನ್ನ ಈ ಪರಿಸ್ಥಿತಿ ಅಭಿವೃದ್ಧಿಯಾಗಬಹುದು ಎಂದು ಮುಂಗಾರು ತಜ್ಞರ ಅಭಿಪ್ರಾಯವಾಗಿದೆ.
ಎಲ್ ನಿನೋ ಇಂದ ಭಾರತದಲ್ಲಿ ಮಳೆ ಕಡಿಮೆಯಾಗಿದೆ. ಇದೀಗ ಫೆಸಿಫಿಕ್ ಪ್ರದೇಶದಲ್ಲಿ ಉಷ್ಣತೆ ಕಡಿಮೆಯಾಗುತ್ತಿದ್ದು ಮಳೆಗಾಲದ ಮಧ್ಯದ ವೇಳೆಗೆ ಯಥಾಸ್ಥಿತಿಗೆ ಬರಲಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


