ಉತ್ತರ ಕೊರಿಯಾ ಮೇಲೆ ಹೊಸ ದಿಗ್ಬಂಧನಕ್ಕೆ ಬರಾಕ್ ಒಬಾಮ ಸಹಿ
ಜಲಜನಕ ಬಾಂಬ್ ಪರೀಕ್ಷೆ ಹಾಗೂ ರಾಕೆಟ್ ಉಡಾವಣೆ ನಡೆಸಿದ್ದ ಉತ್ತರ ಕೊರಿಯಾ ವಿರುದ್ಧ ಹೊಸ ದಿಗ್ಬಂಧನ ವಿಧಿಸುವ ಕಡತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ...

ವಾಷಿಂಗ್ಟನ್: ಜಲಜನಕ ಬಾಂಬ್ ಪರೀಕ್ಷೆ ಹಾಗೂ ರಾಕೆಟ್ ಉಡಾವಣೆ ನಡೆಸಿದ್ದ ಉತ್ತರ ಕೊರಿಯಾ ವಿರುದ್ಧ ಹೊಸ ದಿಗ್ಬಂಧನ ವಿಧಿಸುವ ಕಡತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಸಹಿ ಹಾಕಿದ್ದಾರೆ.
ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಸರ್ವಾಧಿಕಾರಿ ಧೋರಣೆ, ಯುದ್ಧದಾಹಿ ರಾಷ್ಟ್ರ ಉತ್ತರ ಕೊರಿಯಾ ಇತ್ತೀಚೆಗೆ ಜಲಜನಕ ಬಾಂಬ್ ಪರೀಕ್ಷೆ ಹಾಗೂ ರಾಕೇಟ್ ಉಡಾವಣೆಯ ನಡೆಸಿತ್ತು. ಈ ಪ್ರಚೋದನಾತ್ಮಕ ನಡೆಗಾಗಿ ಅಮೆರಿಕವು ಈ ಕ್ರಮ ಕೈಗೊಂಡಿದೆ.
ಉತ್ತರ ಕೊರಿಯಾ ವಿರುದ್ಧ ದಿಗ್ಬಂಧನ ಹೇರುವ ಕಡತವನ್ನು ಅಮೆರಿಕದ ಸಂಸತ್ತು ಒಪ್ಪಿಗೆ ನೀಡಿದ್ದು, ಒಬಾಮ ಅವರು ಸಹಿ ಹಾಕಿದ್ದಾರೆ. ಗೊತ್ತಿದ್ದೂ ಮಾನವ ಹಕ್ಕುಗಳ ದುರುಪಯೋಗ ಅಥವಾ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಯಾವುದೇ ಸರಕು ಅಥವಾ ತಂತ್ರಜ್ಞಾನವನ್ನು ಯಾರೂ ಆಮದು ಮಾಡಿಕೊಳ್ಳದಂತೆ ದಿಗ್ಬಂಧನವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಶ್ವೇತ ಭವನ ತಿಳಿಸಿದೆ.
ಉತ್ತರ ಕೊರಿಯಾದ ನಡವಳಿಕೆಗಳು ಹಾಗೂ ಅವರ ಇತ್ತೀಚಿನ ಪ್ರಚೋದನಾತ್ಮಕ ಕೃತ್ಯಗಳಿಂದ ಅಮೆರಿಕ ಆತಂಕಕ್ಕೆ ಒಳಗಾಗಿದೆ ಎಂದು ಶ್ವೇತಭವನದ ವಕ್ತಾರ ಜೋಷ್ ಅರ್ನೆಷ್ಟ್ ಅವರು ಒಬಾಮ ಅವರು ಕಡತಕ್ಕೆ ಸಹಿ ಹಾಕುವ ಮುನ್ನ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


