ತಿಮ್ಮಪ್ಪನಿಗೆ ಕೋಟಿ ರು. ಮೌಲ್ಯದ ವಜ್ರದ ಕಿರೀಟ..!
ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿಗೆ ಪಾತ್ರವಾಗಿರುವ ತಿಮ್ಮಪ್ಪನ ಖಾತೆಗೆ ಮತ್ತೊಂದು ವಜ್ರದ ಕಿರೀಟ ಸೇರ್ಪಡೆಯಾಗಿದ್ದು, ತಮಿಳುನಾಡು ಮೂಲದ ದಂಪತಿಯೊಬ್ಬರು ಸುಮಾರು 1 ಕೋಟಿ ಮೌಲ್ಯದ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ...

ತಿರುಮಲ: ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿಗೆ ಪಾತ್ರವಾಗಿರುವ ತಿಮ್ಮಪ್ಪನ ಖಾತೆಗೆ ಮತ್ತೊಂದು ವಜ್ರದ ಕಿರೀಟ ಸೇರ್ಪಡೆಯಾಗಿದ್ದು, ತಮಿಳುನಾಡು ಮೂಲದ ದಂಪತಿಯೊಬ್ಬರು ಸುಮಾರು 1 ಕೋಟಿ ಮೌಲ್ಯದ ವಜ್ರದ ಕಿರೀಟವನ್ನು ಅರ್ಪಿಸಿದ್ದಾರೆ.
ಮೂಲತಃ ತಮಿಳುನಾಡಿನ ಕೊಯಮತ್ತೂರು ಮೂಲದ ಬಾಲಮುರುಗನ್ ಮತ್ತು ಪೂಣಿ೯ಮಾ ದ೦ಪತಿಗಳು ಶನಿವಾರ ಆ೦ಧ್ರಪ್ರದೇಶದ ತಿರುಮಲದಲ್ಲಿರುವ ವೆ೦ಕಟೇಶ್ವರ ಸ್ವಾಮಿಗೆ 1 ಕೋಟಿ ರು. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ಹರಕೆಯ ನಿಮಿತ್ತ ತಾವು ತಿಮ್ಮಪ್ಪನಿಗೆ ಈ ಕಿರೀಟವನ್ನು ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಸುಮಾರು 5000ಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ತಿಮ್ಮಪ್ಪ ದೇವಾಲಯಕ್ಕೆ ಚಿನ್ನ, ವಜ್ರ ವೈಡೂರ್ಯಗಳನ್ನು ಅರ್ಪಿಸುವ ಪ್ರಕ್ರಿಯೆಗೆ ನೂರಾರು ವರ್ಷಗಳ ಇತಿಹಾಸವೇ ಇದ್ದು, ಕರ್ನಾಟಕದ ಹೆಮ್ಮೆಯ ಮತ್ತು ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣ ದೇವಾರಾಯನಿಂದ ಹಿಡಿದು ಇತ್ತೀಚಿನ ರಾಜಕಾರಣಿಗಳವರೆಗೆ ಲಕ್ಷಾಂತರ ಮಂದಿ ತಮ್ಮ ಶಕ್ತ್ಯಾನುಸಾರ ತಿಮ್ಮಪ್ಪನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.
ಕೆಲ ವಷ೯ಗಳ ಹಿ೦ದೆ ಇದೇ ದೇಗುಲಕ್ಕೆ ಕನಾ೯ಟಕದ ಮಾಜಿ ಸಚಿವ, ಗಣಿ ದಣಿ ಗಾಲಿ ಜನಾದ೯ನ ರೆಡ್ಡಿ ಸುಮಾರು 45 ಕೋಟಿ ರು. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಸಮಪಿ೯ಸಿದ್ದರು. ಆದರೆ ಕಿರೀಟದಲ್ಲಿ ರೆಡ್ಡಿ ಅವರ ಹೆಸರು ಕೆತ್ತಲಾಗಿತ್ತು ಎಂಬ ಕಾರಣದಿಂದಾಗಿ ದೇವಾಲಯದ ಆಡಳಿತ ಮಂಡಳಿ ಕಿರೀಟವನ್ನು ತಿರಸ್ಕರಿಸಿತ್ತು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಐದು ಸಾವಿರಕ್ಕೂ ಹೆಚ್ಚು ವರ್ಷಗಳ ಐತಿಹ್ಯವಿರುವ ಈ ದೇಗುಲಕ್ಕೆ ವಾರ್ಷಿಕ ಒಂದು ಟನ್ ಗೂ ಅಧಿಕ ಚಿನ್ನವನ್ನು ಭಕ್ತರು ಸಮಪಿ೯ಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


