ಪ್ರಯಾಣಿಕನ ಚಿಕಿತ್ಸೆಗಾಗಿ ಆಟೋವನ್ನೇ ಅಡವಿಟ್ಟ ಚಾಲಕ!
ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಯಾಣಿಕನ ಚಿಕಿತ್ಸೆಗಾಗಿ ಆಟೋ ಚಾಲಕನೊಬ್ಬ ತನ್ನ ಆಟೋವನ್ನೇ ಅಡವಿಟ್ಟು ಹಣ ನೀಡಿದ ಘಟನೆ ಚೆನ್ನೈನಲ್ಲಿ ನಡೆದಿದೆ...

ಚೆನ್ನೈ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪ್ರಯಾಣಿಕನ ಚಿಕಿತ್ಸೆಗಾಗಿ ಆಟೋ ಚಾಲಕನೊಬ್ಬ ತನ್ನ ಆಟೋವನ್ನೇ ಅಡವಿಟ್ಟು ಹಣ ನೀಡಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಕೆಲ ತಿಂಗಳುಗಳ ಹಿಂದೆ ಕೆ. ರವಿಚಂದ್ರನ್ ಎಂಬ ಆಟೋ ಚಾಲಕ ಪಶ್ಚಿಮ ಬಂಗಾಳದಿಂದ ಬಂದಿದ್ದ ಪ್ರಯಾಣಕರೊಬ್ಬರನ್ನು ತನ್ನ ಆಟೋದಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಹಿಂದಿನ ಸೀಟಿನಿಂದ ನರಳಾಡುವ ಶಬ್ದ ಕೇಳಿಸಿತು. ಹಿಂತಿರುಗಿ ನೋಡಿದಾಗ ಹಿಂದೆ ಕುಳಿತಿದ್ದ ವ್ಯಕ್ತಿ ಎದೆ ಹಿಡಿದುಕೊಂಡು ನೋವಿನಿಂದ ಒದ್ದಾಡುತ್ತಿದ್ದರು. ಕೂಡಲೇ ಅವರನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ಹೃದಯದಲ್ಲಿನ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದು ಕೂಡಲೇ ಅವರಿಗೆ ಚಿಕಿತ್ಸೆಯ ನೀಡಬೇಕಾಗಿದ್ದು, ಪೇಸ್ ಮೇಕರ್ ಹಾಕುವ ಅವಶ್ಯಕತೆ ಇದೆ ಎಂದು ಹೇಳಿದರು.
ಪೇಸ್ ಮೇಕರ್ ಹಾಗೂ ಚಿಕಿತ್ಸಾ ವೆಚ್ಚ ಎಲ್ಲಾ ಸೇರಿ 47 ಸಾವಿರ ರು. ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಕೋಲ್ಕೊತಾದಿಂದ ಆಗಮಿಸಿದ ರೋಗಿಯ ಪುತ್ರನ ಬಳಿ ಕೇವಲ 15 ಸಾವಿರ ಮಾತ್ರ ಹಣವಿತ್ತು. ಅವರ ಬಳಿ ಹಣವಿಲ್ಲ ಎಂದು ನನಗೆ ಕೂಡಲೇ ಮನವರಿಕೆಯಾಯಿತು.ಹೀಗಾಗಿ ತನ್ನ ಆಟೋವನ್ನು ಅಡವಿಟ್ಟು ಹಣ ಹೊಂದಿಸಿ ಚಿಕಿತ್ಸೆಗೆ ನೀಡಿದ್ದಾಗಿ ರವಿಚಂದ್ರನ್ ತಿಳಿಸಿದರು.
ಕೆ. ರವಿಚಂದ್ರನ್ ಸೇರಿದಂತೆ ಇಂತ ಪರೋಪಕಾರಿ ಕೆಲಸ ಮಾಡಿದ 16 ಆಟೋ ಚಾಲಕರನ್ನು ಅಣ್ಣಾ ಆಟೋ ವೆಲ್ ಫೇರ್ ಸೊಸೈಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಣ್ಣಾ ಆಟೋ ಟ್ರಸ್ಟ್ ನ ಸಂಸ್ಥಾಪಕ ಅನಿಲ್ ಕಿಚ್ಚ ಮಾತನಾಡಿ, ಹೊರ ರಾಜ್ಯಗಳಿಂದ ಬಂದ ಪ್ರಯಾಣಿಕರು ಮೊದಲು ಭೇಟಿ ಮಾಡುವುದು ಆಟೋ ಚಾಲಕರನ್ನು. ಆಟೋ ಚಾಲಕರ ವರ್ತನೆ ಆ ನಗರದ ಬಗ್ಗೆ ಒಳ್ಳೆ ಅಭಿಪ್ರಾಯ ಮೂಡುವಂತೆ ಮಾಡುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


