ದೇಶ

ನಾಯಿಗೆ ತ್ರಿವರ್ಣ ಧ್ವಜದ ಉಡುಗೆ ತೊಡುಗೆ: ವ್ಯಕ್ತಿ ವಿರುದ್ಧ ಕೇಸು

ತ್ರಿವರ್ಣ ಧ್ವಜದ ಬಟ್ಟೆಯನ್ನು ತನ್ನ ನಾಯಿಗೆ ಹೊದೆಸಿದ್ದಕ್ಕಾಗಿ ಗುಜರಾತ್ ನ ಸೂರತ್ ನಲ್ಲಿ ವ್ಯಕ್ತಿಯೊಬ್ಬರ ವಿರುದ್ಧ...

ನಾಯಿಗೆ ತ್ರಿವರ್ಣ ಧ್ವಜದ ಉಡುಗೆ ತೊಡುಗೆ: ವ್ಯಕ್ತಿ ವಿರುದ್ಧ ಕೇಸು
ನಾಯಿ ತೊಟ್ಟಿದ್ದ ತ್ರಿವರ್ಣ ಧ್ವಜದ ಬಟ್ಟೆ
Published On :

ಸೂರತ್: ತ್ರಿವರ್ಣ ಧ್ವಜದ ಬಟ್ಟೆಯನ್ನು ತನ್ನ ನಾಯಿಗೆ ಹೊದೆಸಿದ್ದಕ್ಕಾಗಿ ಗುಜರಾತ್ ನ ಸೂರತ್ ನಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಗಣರಾಜ್ಯೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪೆಟ್ ಲೌವರ್ಸ್ ಗುಂಪು ಸೂರತ್‌ ನೈಟ್‌ ಮ್ಯಾರಥಾನ್‌ ಸಂಘಟಕರೊಡನೆ ಸೇರಿ ಶ್ವಾನ ಪ್ರದರ್ಶನ ಆಯೋಜಿಸಿತ್ತು.ಸುಮಾರು 150 ಮಂದಿ ತಮ್ಮ ಮುದ್ದಿನ ನಾಯಿಗಳನ್ನು ಓಟಕ್ಕಾಗಿ ವಿವಿಧ ಬಗೆಯ ಉಡುಗೆಗಳಲ್ಲಿ ಅಲಂಕರಿಸಿ ತಂದಿದ್ದರು.

ಭರತ್ ಗೊಹಿಲ್ ಎಂಬುವವರು ತನ್ನ ನಾಯಿಗೆ ಅಶೋಕ ಚಕ್ರ ಸಹಿತವಾಗಿ ತ್ರಿವರ್ಣ ಧ್ವಜದಿಂದ ಹೊಲಿಯಲ್ಪಟ್ಟ ಉಡುಗೆಯನ್ನು ತೊಡಿಸಿ ಪ್ರದರ್ಶನಕ್ಕೆ ಕರೆದುಕೊಂಡು ಬಂದಿದ್ದರು. ಆದರೆ ಕಾರ್ಯಕ್ರಮದ ಸಂಘಟಕರು ಆಕ್ಷೇಪ ಎತ್ತಿದರು.ಆದರೆ ಭಾತಾರ್‌ ಅವರು ನಮ್ಮ ಮನೆಯ ಮುದ್ದಿನ ನಾಯಿಯು ಮನೆಯ ಓರ್ವ ಸದಸ್ಯನಂತಿರುವಾಗ ಅದನ್ನು ನಮ್ಮಂತೆಯೇ ಎಂದು ತಿಳಿಯಬೇಕು ಎಂದು ಒತ್ತಾಯಿಸಿದರು.

ಆದರೆ ಸಂಘಟಕರು ಭಾತಾರ್‌ ಅವರ ವಾದವನ್ನು ಒಪ್ಪಲಿಲ್ಲ ಮತ್ತು ನಾಯಿಯನ್ನು ಓಟದಲ್ಲಿ ಸೇರಿಸಿಕೊಳ್ಳಲಿಲ್ಲ. ಆದರೆ ಅಷ್ಟು ಹೊತ್ತಿಗಾಗಲೇ ಭಾತಾರ್‌ ಅವರ ತ್ರಿವರ್ಣ ಧ್ವಜ ಉಡುಗೆಯಲ್ಲಿ ನಾಯಿ ಹೆಚ್ಚಿನವರ ಗಮನ ಸೆಳೆದಿತ್ತು. ಈ ಬಗ್ಗೆ ನಾಗರಿಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಆ ಪ್ರಕಾರ ಪೊಲೀಸರು ಭಾತಾರ್‌ ವಿರುದ್ಧ ಕೇಸು ದಾಖಲಿಸಿಕೊಂಡು ಈಗ ತನಿಖೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಗೌರವ ಕಾಯ್ದೆ 1971 ಪ್ರಕಾರ ರಾಷ್ಟ್ರಧ್ವಜಕ್ಕೆ ಅವಮಾನವೆಂದು ಭಾತಾರ್‌ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಆರೋಪ ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.