ಶಸ್ತ್ರಾಸ್ತ್ರ ಆಮದಿನಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರ: ವರದಿ
ಅತೀ ದೊಡ್ಡ ಶಸ್ತ್ರಾಸ್ತ್ರ ಆಮದಿನಲ್ಲಿ ಸೌದಿ ಅರೇಬಿಯಾ ಬಿಟ್ಟರೆ ಭಾರತ ವಿಶ್ವದ ಎರಡನೇ ರಾಷ್ಟ್ರ ಎಂದು ಅಮೆರಿಕದ ಸಂಸದೀಯ ವರದಿ ಬಹಿರಂಗಪಡಿಸಿದೆ...

Published On :
ನವದೆಹಲಿ: ಅತೀ ದೊಡ್ಡ ಶಸ್ತ್ರಾಸ್ತ್ರ ಆಮದಿನಲ್ಲಿ ಸೌದಿ ಅರೇಬಿಯಾ ಬಿಟ್ಟರೆ ಭಾರತ ವಿಶ್ವದ ಎರಡನೇ ರಾಷ್ಟ್ರ ಎಂದು ಅಮೆರಿಕದ ಸಂಸದೀಯ ವರದಿ ಬಹಿರಂಗಪಡಿಸಿದೆ.
ಭಾರತ 2008 ರಿಂದ 2015ರ ವರೆಗೆ ರಕ್ಷಣಾ ಸಲಕರಣೆಗಳನ್ನು ಖರೀದಿಸಲು 34 ಶತಕೋಟಿ ಡಾಲರ್ ವ್ಯಯಿಸಿದೆ. ಆದರೆ ವಿಶ್ವದ ಅಗ್ರ ಶಸ್ತ್ರಾಸ್ತ್ರ ಖರೀದಿ ದೇಶವಾಗಿರುವ ಸೌದಿ ಅರೇಬಿಯಾ 93.5 ಬಿಲಿಯನ್ ಡಾಲರ್ ವ್ಯಯಿಸಿದೆ ಎಂದು ಅಭಿವೃದ್ಧಿಶೀಲ ದೇಶಗಳ ಸಾಂಪ್ರದಾಯಿಕ ಶಸ್ತ್ರಾಸ್ತ್ರ ವರ್ಗಾವಣೆ 2008-2015ರ ಅಮೆರಿಕ ಸಂಸದೀಯ ವರದಿ ಹೇಳಿದೆ.
ಭಾರತವು ಪ್ರಸ್ತುತ ತನ್ನ ಸೇನೆಯ ನವೀಕರಣವನ್ನು ಬೃಹತ್ ಪ್ರಮಾಣದಲ್ಲಿ ಕೈಗೊಂಡಿದ್ದು ಅಪಾರ ಪ್ರಮಾಣದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


