ಶಸ್ತ್ರಾಸ್ತ್ರ

ಜಮ್ಮು-ಕಾಶ್ಮೀರ: ಯುದ್ಧ ಸಜ್ಜುಗೊಳ್ಳುವಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳು ವಶಕ್ಕೆ; ತಪ್ಪಿದ ಭಾರಿ ಅನಾಹುತ
ಸ್ಥಳೀಯ ಸೇನಾ ಗುಪ್ತಚರ ಘಟಕದ ನಿರ್ದಿಷ್ಟ ಮಾಹಿತಿಯ ಮೇರೆಗೆ, ಜಿಲ್ಲೆಯ ಮಹೋರ್ ಪ್ರದೇಶದ ಖತಾಜಿ ರಿಡ್ಜ್‌ನ ದಟ್ಟ ಕಾಡುಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರೀ ಹಿನ್ನಡೆ: ಶಸ್ತ್ರಾಸ್ತ್ರ ಸರಬರಾಜು ಸ್ಥಗಿತಗೊಳಿಸಿದ ಟರ್ಕಿ
ಭಾರತದೊಂದಿಗಿನ ಯುದ್ಧದ ಭೀತಿ ನಡುವೆಯೇ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಟರ್ಕಿ ಹೇಳಿದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರಿಗೆ ಗೊತ್ತಿದೆ, ಮಹಜರಿಗೆ ಒಳಪಡಿಸಿ ವಶಕ್ಕೆ ತೆಗೆದುಕೊಳ್ತಾರೆ: ಸಿದ್ದರಾಮಯ್ಯ
ಶರಣಾದ ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ಎಲ್ಲಿಟ್ಟಿದ್ದಾರೆ ಎಂಬುದು ಗೊತ್ತಿದೆ. ಪೊಲೀಸರು ಮಹಜರು ನಡೆಸಿ ಅವುಗಳನ್ನು ವಶಕ್ಕೆ ಪಡೆಯಲಿದ್ದಾರೆ. ನಕ್ಸಲಿಸಂ ಇರಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ.

ಛತ್ತೀಸ್‌ಗಢ: ಸುಕ್ಮಾದಲ್ಲಿ ಇಬ್ಬರು ಪೊಲೀಸರ ಮೇಲೆ ಮಾವೋವಾದಿಗಳ ದಾಳಿ, ಶಸ್ತ್ರಾಸ್ತ್ರಗಳೊಂದಿಗೆ ಪರಾರಿ
ಜಾಗರಗುಂದ ಗ್ರಾಮದ ಮಾರುಕಟ್ಟೆಯಲ್ಲಿ ಭದ್ರತಾ ಕಾರ್ಯಕ್ಕೆ ಪೊಲೀಸರನ್ನು ನಿಯೋಜಿಸಿದ್ದಾಗ ಮಾವೋವಾದಿಗಳು ಇಬ್ಬರು ಸಿಬ್ಬಂದಿಯ ಸೇವಾ ರೈಫಲ್‌ಗಳನ್ನು ಕಿತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಷರತ್ತುಗಳ ಅನ್ವಯ ರೈತರಿಗೆ ಶಸ್ತ್ರಾಸ್ತ್ರಗಳ ಹಿಂದಿರುಗಿಸಲಾಗಿದೆ; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿರುವ ಭಾಗಗಳ ಪರವಾನಗಿ ಹೊಂದಿರುವ ರೈತರಿಂದ ಸ್ವಾಧೀನಕ್ಕೆ ಪಡೆದಿದ್ದ ಶಸ್ತ್ರಾಸ್ತ್ರಗಳನ್ನು ಷರತ್ತುಗಳ ಅನ್ವಯ ಹಿಂದಿರುಗಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಮುಂಬೈ ಎಟಿಎಸ್ ನಿಂದ 6 ಮಂದಿಯ ಬಂಧನ, ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ
ಮುಂಬೈ ನ ಭಯೋತ್ಪಾದನೆ ನಿಗ್ರಹ ದಳ 6 ಮಂದಿಯನ್ನು ಬಂಧಿಸಿದ್ದು, ಬಂಧಿತರಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನದಿಂದ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ಶಸ್ತ್ರಾಸ್ತ್ರ ಮಾರಾಟ!
ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನ ಕಳೆದ ವರ್ಷ ಉಕ್ರೇನ್ ಗೆ 364 ಮಿಲಿಯನ್ ಡಾಲರ್ ನಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ ಎಂದು ಮಾಧ್ಯಮ ವರದಿಯೊಂದರಿಂದ ತಿಳಿದುಬಂದಿದೆ.

ಬಂದೂಕು ಹಿಡಿದು ಮಮತಾ ಬ್ಯಾನರ್ಜಿ ಮನೆಗೆ ನುಗ್ಗಲು ಯತ್ನ: ವ್ಯಕ್ತಿ ಬಂಧನ
ಕೋಲ್ಕತ್ತಾದ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದೂಕು ಹಿಡಿದು ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ: ಡ್ರೋನ್‌ನಿಂದ ಬಿದ್ದಿದ್ದ ಪ್ಯಾಕೆಟ್‌ನಿಂದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಂಡ ಪೊಲೀಸರು
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋನ್‌ನಿಂದ ಬೀಳಿಸಲಾಗಿದೆ ಎಂದು ಶಂಕಿಸಲಾದ ಪ್ಯಾಕೇಜ್‌ನಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕ ಸಾಮಗ್ರಿಗಳ ಸಂಗ್ರಹವನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

