ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆ ಬಂಧನ; 11 ಮದುವೆಯಾದ 26ರ ಯುವತಿ!
ಮದುವೆ ಹೆಸರಲ್ಲಿ ಬರೊಬ್ಬರಿ 11 ಪುರುಷರಿಗೆ ಮೊಸ ಮಾಡಿದ ಕುಖ್ಯಾತ ಮಹಿಳೆಯನ್ನು ಭಾನುವಾರ ನೋಯ್ಡಾದಲ್ಲಿ ಬಂಧಿಸಲಾಗಿದೆ.

ನೋಯ್ಡಾ: ಮದುವೆ ಹೆಸರಲ್ಲಿ ಬರೊಬ್ಬರಿ 11 ಪುರುಷರಿಗೆ ಮೊಸ ಮಾಡಿದ ಕುಖ್ಯಾತ ಮಹಿಳೆಯನ್ನು ಭಾನುವಾರ ನೋಯ್ಡಾದಲ್ಲಿ ಬಂಧಿಸಲಾಗಿದೆ.
ಮಧ್ಯಪ್ರದೇಶದ ಇಂದೋರ್ ಮೂಲದ ಮೇಘ ಭಾರ್ಗವ್ ಬಂಧಿತ ಮಹಿಳೆಯಾಗಿದ್ದು, ಈಕೆಯೊಂದಿಗೆ ಆಕೆಯ ಅಕ್ಕ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಸೇರಿಕೊಂಡು ವಧು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡುವ ಶ್ರೀಮಂತರನ್ನು ಹುಡುಕಿ ಅವರೊಂದಿಗೆ ಮೇಘಾಳನ್ನು ಮದುವೆ ಮಾಡಿಕೊಡುತ್ತಾರೆ. ಬಳಿಕ ಒಂದಷ್ಟು ದಿನಗಳ ಕಾಲ ಸಂಸಾರ ಮಾಡಿ ಬಳಿಕ ಸಮಯ ನೋಡಿ ಮನೆಯಲ್ಲಿರುವ ಬೆಲೆ ಬಾಳುವ ಚಿನ್ನಾಭರಣ ಹಾಗೂ ಹಣವನ್ನು ಹೊತ್ತು ಪರಾರಿಯಾಗುತ್ತಿದ್ದರು.
ಈ ಕುಖ್ಯಾತ ಜೋಡಿ ಈ ವರೆಗೂ ಸುಮಾರು 11 ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಇವರ ಮೋಸಕ್ಕೆ ಬಲಿಯಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇತ್ತೀಚೆಗೆ ಕೇರಳದ ಕೊಚ್ಚಿ ಮೂಲದ ಜಸ್ಟಿನ್ ಎಂಬ ವ್ಯಕ್ತಿ ಕಳೆದ ಅಕ್ಟೋಬರ್ ನಲ್ಲಿ ತನ್ನ ಹೆಂಡತಿ ಮೇಘ ಕಾಣಿಸುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೇಘಳೊಂದಿಗೆ 15 ಲಕ್ಷ ನಗದು, ಚಿನ್ನಾಭರಣ ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೇರಳ ಪೊಲೀಸರು ಸತತ 2 ತಿಂಗಳ ತನಿಖೆ ಬಳಿಕ ಮೇಘಾ ಮತ್ತು ಆಕೆಯ ತಂಡವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿರುವುದನ್ನು ಪತ್ತೆ ಮಾಡಿದ್ದರು. ಅಂತೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ನೋಯ್ಡಾ ಪೊಲೀಸರ ನೆರವಿನೊಂದಿಗೆ ಮೇಘಾ, ಸಹೋದರಿ ಪ್ರಾಚಿ ಹಾಗೂ ಆಕೆಯ ಗಂಡ ದೇವೆಂದ್ರ ಶರ್ಮಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಮೇಘಾ, ಜಸ್ಟಿನ್ ಗೂ ಮೊದಲು ಕೇರಳದ ಮೂವರನ್ನು ಮದುವೆಯಾಗಿದ್ದಳು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮೇಘ ಮ್ಯಾಟ್ರಿಮನಿ ವೆಬ್ ತಾಣಗಳ ಮೂಲಕ ವಿಚ್ಛೇದನ ಪಡೆದುಕೊಂಡ, ಒಬ್ಬರೇ ಇರುವ ಧನವಂತರನ್ನು ಹುಡುಕಿ ಮದುವೆ ಮಾಡಿಕೊಂಡು ಕೆಲವು ತಿಂಗಳ ನಂತರ ಸಮಯ ನೋಡಿಕೊಂಡು ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು, ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆ ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ವಂಚಕರ ಗ್ಯಾಂಗ್ ವೊಂದನ್ನು ಪೊಲೀಸರು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


