ದೇಶ

ರಾಜಕೀಯ ಪಕ್ಷಗಳಿಗೆ 2 ಸಾವಿರ ಮೀರಿದ ದೇಣಿಗೆ ನಿಷೇಧಿಸಿ; ಚುನಾವಣಾ ಆಯೋಗ

ಕಾಳಧನವು ಚುನಾವಣೆಯಲ್ಲಿ ಬಳಕೆಯಾಗದಂತೆ ತಡೆಯುವ ಸಲುವಾಗಿ ರಾಜಕೀಯ ಪಕ್ಷಗಳಿಗೆ 2 ಸಾವಿರ ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಅನಾಮಧೇಯ...

ರಾಜಕೀಯ ಪಕ್ಷಗಳಿಗೆ 2 ಸಾವಿರ ಮೀರಿದ ದೇಣಿಗೆ ನಿಷೇಧಿಸಿ; ಚುನಾವಣಾ ಆಯೋಗ
ನೋಟು
Published On :

ನವದೆಹಲಿ: ಕಾಳಧನವು ಚುನಾವಣೆಯಲ್ಲಿ ಬಳಕೆಯಾಗದಂತೆ ತಡೆಯುವ ಸಲುವಾಗಿ ರಾಜಕೀಯ ಪಕ್ಷಗಳಿಗೆ 2 ಸಾವಿರ ರುಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಅನಾಮಧೇಯ ದೇಣಿಗೆ ನೀಡುವುದನ್ನು ನಿಷೇಧಿಸಲು ಕಾನೂನು ತಿದ್ದುಪಡಿ ಮಾಡುವಂತೆ ಚುನಾವಣಾ ಆಯೋಗವೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಅನಾಮಧೇಯರಿಂದ ದೇಣಿಗೆ ಸ್ವೀಕರಿಸಲು ರಾಜಕೀಯ ಪಕ್ಷಗಳಿಗೆ ಸಂವಿಧಾನ ಅಥವಾ ಕಾನೂನಿನ ನಿರ್ಬಂಧವಿಲ್ಲ. ಆದರೆ 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29ಸಿ ಅಡಿಯಲ್ಲಿ ದೇಣಿಗೆಯನ್ನು ಘೋಷಿಸುವುದು ಕಡ್ಡಾಯ. ಆದರೆ 20 ಸಾವಿರ ರೂಪಾಯಿಗಿಂತ ಹೆಚ್ಚಿನ ದೇಣಿಗೆಗೆ ಮಾತ್ರ ಇದು ಅನ್ವಯವಾಗುತ್ತದೆ.

ಕೇಂದ್ರ ಸರ್ಕಾರಕ್ಕೆ ಚುನಾವಣಾ ಆಯೋಗವು ಕಳುಹಿಸಿರುವ ಪ್ರಸ್ತಾಪಿತ ತಿದ್ದುಪಡಿಯ ಪ್ರಕಾರ ಪ್ರಸ್ತಾಪಿತ ಚುನಾವಣಾ ಸುಧಾರಣೆಗಳ ಭಾಗವಾಗಿ ದೇಣಿಗೆ ನಿಷೇಧದ ಪ್ರಸ್ತಾಪವನ್ನೂ ಸೇರಿಸಲು ಕೋರಿದ್ದು ಅದರಲ್ಲಿ 2 ಸಾವಿರ ರುಪಾಯಿ ಅಥವಾ ಅದಕ್ಕೆ ತತ್ಸಮಾನವಾದ ಕೊಡುಗೆಯನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.