ಹಣ ಡ್ರಾ ಮಾಡಲು ವಿಫಲಗೊಂಡ ಪತ್ನಿ: ಚಿಕಿತ್ಸೆ ಸಿಗದೆ ಅನಾರೋಗ್ಯದಿಂದ ಕಾರ್ಮಿಕ ಸಾವು
ಹಣವಿಲ್ಲದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಕಾರ್ಮಿಕನೊಬ್ಬ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ....

ಅಲಿಗಡ: ಹಣವಿಲ್ಲದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಕಾರ್ಮಿಕನೊಬ್ಬ ಮೃತ ಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಶಮೀಮ್ ಮತ ಕಾರ್ಮಿಕ, ಹಲವು ದಿನಗಳಿಂದ ಶಮೀಮ್ ಅನಾರೋಗ್ಯದಿಂದ ನರಳುತ್ತಿದ್ದ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಆತನಿಗೆ ಚಿಕಿತ್ಸೆಗಾಗಿ ಹಾಗೂ ಔಷಧಿಗಾಗಿ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಸಾಧ್ಯವಾಗಲಿಲ್ಲ ಎಂದು ಆತನ ಪತ್ನಿ ರುಕ್ಸಾನಾ ತಿಳಿಸಿದ್ದಾಳೆ.
ನೋಟು ನಿಷೇಧದ ನಂತರ ಕಳೆದ ಕೆಲ ದಿನಗಳಿಂದ ಕೆಲಸ ವಿಲ್ಲದೇ ಮನೆಯಲ್ಲಿದ್ದ ಆತ ಕೆಲಸ ಮಾಡುತ್ತಿದ್ದ ಘಟಕಕ್ಕೆ ಬೀಗ ಜಡಿಯಲಾಗಿತ್ತು. ಈ ದಂಪತಿಗೆ 8 ವರ್ಷಗ ಮಗಳಿದ್ದಾಳೆ. ತನ್ನ ಪತಿಗೆ ಜ್ವರ ಬಂದಾಗಿನಿಂದ ಕೂಡಿಟ್ಟಿದ್ದ ಹಣದಿಂದ ಜೀವನ ನಡೆಸಿದೆವು, ನಿನ್ನೆ ಶಮೀಮ್ ಆರೋಗ್ಯದಲ್ಲಿ ತೀವ್ರ ಏರು ಪೇರಾಯಿತು. ಔಷಧಿ ತರಲು ಹಣಕ್ಕಾಗಿ ಎಟಿಎಂ ಗೆ ತೆರಳಿದ್ದೆ, ಆದರೆ ಅಲ್ಲಿ ಹಣ ಸಿಗಲಿಲ್ಲ. ಹೀಗಾಗಿ ನನ್ನ ಪತಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ ಎಂದು ಆಕೆ ನೊಂದು ನುಡಿದ್ದಾಳೆ. ಈ ಸಂಬಂಧ ಮೃತ ಕಾರ್ಮಿಕನ ಪತ್ನಿ ಮಾಡಿರುವ ಆರೋಪದ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುವುದಾಗಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


