ಶೀಘ್ರದಲ್ಲೇ 20 ಮತ್ತು 50 ಹೊಸ ನೋಟು ಮುದ್ರಣ: ಆರ್‌ಬಿಐ
500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಎದುರಾಗಿರುವ ಹಣದ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಕ್ ಶೀಘ್ರದಲ್ಲೇ...

ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಎದುರಾಗಿರುವ ಹಣದ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಕ್ ಶೀಘ್ರದಲ್ಲೇ 20 ಮತ್ತು 50 ನೋಟುಗಳನ್ನು ಮುದ್ರಿಸಲಿದೆ.
ಆರ್ಬಿಐ ತನ್ನ ಪ್ರಕಟಣೆಯಲ್ಲಿ ಶೀಘ್ರದಲ್ಲೇ 20 ಹೊಸ ನೋಟುಗಳನ್ನು ಆರ್ಬಿಐ ಮುದ್ರಿಸಲಿದ್ದು ಇದರಲ್ಲಿ ಮಹಾತ್ಮ ಗಾಂಧಿ ಸೀರೀಸ್ 2005, ಎರಡೂ ಸಂಖ್ಯಾ ಪ್ಯಾನಲ್ ಗಳಲ್ಲಿ L ಎಂಬ ಇನ್ಸೆಂಟ್ ಲೆಟರ್ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದು ಅಚ್ಚಾಗಿರುತ್ತದೆ ಎಂದು ತಿಳಿಸಿದೆ.
20 ರುಪಾಯಿ ನೋಟಿನಂತೆ 50 ಹೊಸ ನೋಟಿನಲ್ಲೂ ಮಹಾತ್ಮ ಗಾಂಧಿ ಸೀರಿಸ್ 2005 ಇರಲಿದೆ. ನೋಟುಗಳಲ್ಲಿ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿದ್ದು ಮುದ್ರಣ ಇಸವಿ 2016 ಎಂದಿರಲಿದ್ದು, ಇನ್ಸೆಂಟ್ ಲೆಟರ್ ಮಾತ್ರ ಇರುವುದಿಲ್ಲ.
ಹೊಸ ನೋಟುಗಳ ಜತೆಗೆ ಹಳೆಯ ನೋಟುಗಳು ಚಲಾವಣೆಯಲ್ಲಿ ಇರುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


