ದೇಶ

ದೆಹಲಿ: 'ನೋ ಕ್ಯಾಷ್' ಫಲಕ ನೋಡಿ ಬೇಸತ್ತು ಎಟಿಎಂ ಗೆ ಪೂಜೆ ಮಾಡಿದ ಜನರು!

ಎಟಿಎಂ ಮುಂಭಾಗದಲ್ಲಿದ್ದ ’ನೋ ಕ್ಯಾಷ್’ ಫಲಕವನ್ನು ನೋಡಿ ಬೇಸತ್ತ ಜನರು ಎಟಿಎಂಗೆ ಪೂಜೆ ಸಲ್ಲಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ದೆಹಲಿ: 'ನೋ ಕ್ಯಾಷ್' ಫಲಕ ನೋಡಿ ಬೇಸತ್ತು ಎಟಿಎಂ ಗೆ ಪೂಜೆ ಮಾಡಿದ ಜನರು!
ದೆಹಲಿ: ನೋ ಕ್ಯಾಷ್ ಫಲಕ ನೋಡಿ ಬೇಸತ್ತು ಎಟಿಎಂ ಗೆ ಪೂಜೆ ಮಾಡಿದ ಜನರು!
Published On :
ನವದೆಹಲಿ: 500, 1000 ರೂ ಮುಖಬೆಲೆಯ ನೋಟು ನಿಷೇಧದ ಪರಿಣಾಮವನ್ನು ಜನರು ಇನ್ನೂ ಎದುರಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬುವಂತೆ ಎಟಿಎಂ ಮುಂಭಾಗದಲ್ಲಿದ್ದ ’ನೋ ಕ್ಯಾಷ್’ ಫಲಕವನ್ನು ನೋಡಿ ಬೇಸತ್ತ ಜನರು ಎಟಿಎಂಗೆ ಪೂಜೆ ಮಾಡಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ. 
ನಗದು ಇಲ್ಲ ಎಂಬ ಫಲಕವನ್ನು ಗಮನಿಸಿರುವ ಸಾರ್ವಜನಿಕರು ನಗದು ನೀಡುವಂತೆ ಪ್ರಾರ್ಥಿಸಿ ಎಟಿಎಂ ಗೆ ಪೂಜೆ ಸಲ್ಲಿಸಿದ್ದಾರೆ. " ನೋಟು ನಿಷೇಧದ ನಿರ್ಧಾರ ಘೋಷಣೆಯಾದಾಗಿನಿಂದಲೂ ದೆಹಲಿಯ ಜಗತ್ ಪುರಿ ಪ್ರದೇಶದಲ್ಲಿರುವ ಎಸ್ ಬಿಐ ನ ಎಟಿಎಂ ನಲ್ಲಿ ಹಣ ದೊರೆಯುತ್ತಿಲ್ಲ.  ಈ ಹಿನ್ನೆಲೆಯಲ್ಲಿ ಎಟಿಎಂ ಗೆ ತೆರಳಿ ಪೂಜೆ ಮಾಡುವ ಮೂಲಕ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಜನರ ಸಂಕಷ್ಟಗಳನ್ನು ಎತ್ತಿ ತೋರಿಸಲು ಎಟಿಎಂ ಗೆ ಪೂಜೆ ಸಲ್ಲಿಸಲಾಗಿದೆ ಶೀಘ್ರವೇ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.