ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ವಿನಯವಂತ, ಪ್ರಾಮಾಣಿಕರು!
ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಹೆಚ್ಚು ವಿನಯ, ಪ್ರಾಮಾಣಿಕ, ಮುಕ್ತತೆಯ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಿದೆ.

ಲಂಡನ್: ಆಂಡ್ರಾಯ್ಡ್ ಹಾಗೂ ಐ ಫೋನ್ ಗಳ ಮೂಲಕ ಬಳಕೆದಾರರ ವ್ಯಕ್ತಿತ್ವವನ್ನು ಗುರುತಿಸುವ ಅಧ್ಯಯನವನ್ನು ಲಿಂಕನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ್ದು, ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಹೆಚ್ಚು ವಿನಯ, ಪ್ರಾಮಾಣಿಕ, ಮುಕ್ತತೆಯ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಿದೆ.
ಐ-ಫೋನ್ ಬಳಕೆದಾರರು ಆಂಡ್ರಾಯ್ಡ್ ಬಳಕೆದಾರರಿಗಿಂತ ಉನ್ನತವಾದ ಫೋನ್ ಬಳಕೆ ಮಾಡುವುದು ಮುಖ್ಯವೆಂಬ ಭಾವನೆ ಹೊಂದಿರುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ. ಇನ್ನು ಈ ವರದಿ ಪ್ರಕಾರ ಮಹಿಳೆಯರು ಆಂಡ್ರಾಯ್ಡ್ ಫೋನ್ ಗಿಂತ ಎರಡು ಪಟ್ಟು ಹೆಚ್ಚು ಐ-ಫೋನ್ ಗಳಿಗೆ ಆದ್ಯತೆ ನೀಡುತ್ತಾರೆ ಎಂದು ತಿಳಿದುಬಂದಿದೆ.
ಆಂಡ್ರಾಯ್ಡ್ ಬಳಕೆದಾರರು ಐಫೋನ್ ಬಳಕೆದಾರರಿಗಿಂತ ಹೆಚ್ಚು ಪ್ರಾಮಾಣಿಕರು, ನಮ್ರತೆಯುಳ್ಳವರಾಗಿರುತ್ತಾರೆ ಎಂದು ಲಿಂಕನ್ ವಿವಿಯ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹೇಳಿದ್ದಾರೆ. ಲಾಂಕ್ಯಾಸ್ಟರ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಅಧ್ಯನದಲ್ಲಿ ಆಂಡ್ರಾಯ್ಡ್ ಹಾಗೂ ಐಫೋನ್ ಬಳಕೆದಾರರನ್ನು ಸಮೀಕ್ಷೆಗೊಳಪಡಿಸಲಾಗಿದೆ.
ಸೆ.1 ರಂದು ಬ್ರಿಟಿಷ್ ಸೈಕಾಲಾಜಿಕಲ್ ಸೊಸೈಟಿಯಲ್ಲಿ ನಡೆಯಲಿದ್ದ ಕಾರ್ಯಕ್ರಮ ಅಧ್ಯಯನ ವರದಿ ಮಂಡನೆ ನಿಗದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


