ಕೇರಳದಲ್ಲಿ ಬಿಜೆಪಿಯಿಂದ ಜನ್ಮಾಷ್ಟಮಿ ಆಚರಣೆ, ಸಿಪಿಐ(ಎಂ) ನಿಂದ ಪರ್ಯಾಯ ಅಭಿಯಾನ
ಕೇರಳದಲ್ಲಿ ಒಂದೆಡೆ ಬಿಜೆಪಿ, ಆರ್ ಎಸ್ ಎಸ್ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶೋಭಾ ಯಾತ್ರೆ ಗಮ್ಮಿಕೊಂಡಿದ್ದರೆ ಅದಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಅಭಿಯಾನ ನಡೆಸಿದೆ.

ತಿರುವನಂತಪುರಂ: ಕೇರಳದಲ್ಲಿ ಒಂದೆಡೆ ಬಿಜೆಪಿ, ಆರ್ ಎಸ್ ಎಸ್ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶೋಭಾ ಯಾತ್ರೆ ಗಮ್ಮಿಕೊಂಡಿದ್ದರೆ ಅದಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಅಭಿಯಾನ ನಡೆಸಿದೆ.
ಸಾಮಾಜಿಕ ಸುಧಾರಕ ಚಟ್ಟಂಬಿ ಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ 5 ದಿನಗಳ ಕಾಲ ಸಿಪಿಐ(ಎಂ) ನಮಕ್ಕು ಜಾತಿ ಇಲ್ಲ( ನಮಗೆ ಜಾತಿ ಇಲ್ಲ) ಎಂಬ ಹೆಸರಿನಡಿ ಅಭಿಯಾನ ಹಮ್ಮಿಕೊಂಡಿತ್ತು. ಆದರೆ ಕಾಂಗ್ರೆಸ್ ಸಿಪಿಐ(ಎಂ)ನ ಕ್ರಮಕ್ಕೆ ಅಸಮಾಧಾನ ಅವ್ಯಕ್ತಪಡಿಸಿದ್ದು, ಕೃಷ್ಣ ಜನ್ಮಾಷ್ಟಮಿಯಂದೂ ಅಭಿಯಾನ ನಡೆಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಬಿಗಿ ಭದ್ರತೆಯೊಂದಿಗೆ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆ ನಡೆಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಬಿಜೆಪಿ 450 ಕೃಷ್ಣ ಜಯಂತಿ ಮೆರವಣಿಗೆ ನಡೆಸಿದ್ದರೆ ಸಿಪಿಐ(ಎಂ) ಚಟ್ಟಂಬಿ ಸ್ವಾಮಿ ಅವರ ಜನ್ಮ ದಿನಾಚರಣೆ ಅಂಗವಾಗಿ 305 ಕೇಂದ್ರಗಳಲ್ಲಿ ಮೆರವಣಿಗೆ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


