ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗೆ ವಾಟ್ಸಪ್ ಗ್ರೂಪ್ ನಿಂದ ನವೀಕರಣ!
ಸಾಮಾಜಿಕ ಜಾಲಾತಾಣಗಳ ಬಗ್ಗೆ ಋಣಾತ್ಮಕ ಸುದ್ದಿಗಳೇ ಹೆಚ್ಚಾಗಿರುವಾಗ, ವಾಟ್ಸ್ ಆಪ್ ಮೂಲಕ ನಡೆದ ರಚನಾತ್ಮಕ ಘಟನೆಯೊಂದು ಉದಾಹರಣೆಯಾಗಿ ನಿಂತಿದೆ.

ಶಿವಗಂಗಾ: ಸಾಮಾಜಿಕ ಜಾಲಾತಾಣಗಳ ಬಗ್ಗೆ ಋಣಾತ್ಮಕ ಸುದ್ದಿಗಳೇ ಹೆಚ್ಚಾಗಿರುವಾಗ, ವಾಟ್ಸ್ ಆಪ್ ಮೂಲಕ ನಡೆದ ರಚನಾತ್ಮಕ ಘಟನೆಯೊಂದು ಉದಾಹರಣೆಯಾಗಿ ನಿಂತಿದೆ.
ಮುಚ್ಚುವ ಸ್ಥಿತಿಯಲ್ಲಿದ್ದ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕನ್ನಿಮಾರ್ಪಟ್ಟಿ ಗ್ರಾಮದ ಸರ್ಕಾರಿ ಶಾಲೆಯೊಂದು ವಾಟ್ಸ್ ಆಪ್ ಗ್ರೂಪ್ ನಿಂದ ಮತ್ತೆ ತಲೆ ಎತ್ತಿ ನಿಂತಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿದ್ದವರ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಇದ್ದದ್ದು ಕೇವಲ 12. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದ ಪರಿಣಾಮ ಶಾಲೆಯನ್ನು ಮುಚ್ಚಲು ಸಂಬಂಧಿಸಿದ ಅಧಿಕಾರಿಗಳು ಚಿಂತನೆ ನಡೆಸಿದ್ದರು. ಈ ವಿಷಯ ಮೂಲತಃ ಕನ್ನಿಮಾರ್ಪಟ್ಟಿ ಗ್ರಾಮದವರಾಗಿದ್ದ ಈಗ ವಿದೇಶಗಳಲ್ಲಿ ನೆಲೆಸಿರುವವರ ವಾಟ್ಸ್ ಆಪ್ ಗ್ರೂಪ್ ಗೆ ತಲುಪಿದೆ. ಶಾಲೆಯನ್ನು ಉಳಿಸಲು ಕೂಡಲೇ ಸಕ್ರಿಯರಾದ ಕನ್ನಿಮಾರ್ಪಟ್ಟಿ ಗ್ರಾಮದ ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯಲು ಅಗತ್ಯವಿರುವ ಅನುಕೂಲಗಳನ್ನು ಕಲ್ಪಿಸಿ ಈ ವರ್ಷ ಕನಿಷ್ಠ 60 ಹೊಸ ವಿದ್ಯಾರ್ಥಿಗಳು ದಾಖಲಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರು.
ಅದರಂತೆಯೇ ವಾಟ್ಸ್ ಆಪ್ ಗ್ರೂಪ್ ನ ಸದಸ್ಯರು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆಗೆ ಕಾರಣವಾಗಿದ್ದ ಸೌಲಭ್ಯಗಳನ್ನು ಒದಗಿಸಿದ್ದಾರೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಗ್ರೂಪ್ ನ ಸದಸ್ಯರೊಬ್ಬರು ತಿಳಿಸಿದ್ದಾರೆ. ಸಂಗ್ರಹ ಮಾಡಿದ 7 ಲಕ್ಷ ರೂಪಾಯಿ ದೇಣಿಗೆಯ ಹಣದಿಂದ ಶಾಲೆಯ ಕಟ್ಟಡವನ್ನು ನವೀಕರಿಸಿ, ಅಗತ್ಯವಿರುವ ಉಪಕರಣಗಳನ್ನು ತರಿಸಲಾಗಿದೆ. ದೇಣಿಗೆ ನೀಡಿದ 120 ಜನರಲ್ಲಿ ಬಹುತೇಕ ಮಂದಿ ಈ ಶಾಲೆಯಲ್ಲಿ ಓದಿಲ್ಲವಾದರೂ ದೇಣಿಗೆ ನೀಡಿದ್ದಾರೆ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಗ್ರಾಮದಲ್ಲಿರುವವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವಷ್ಟು ಅನುಕೂಲ ಹೊಂದಿಲ್ಲವಾದರೂ, ಸರ್ಕಾರಿ ಶಾಲೆಯಲ್ಲಿ ಸೌಲಭ್ಯಗಳಿಲ್ಲದ ಕಾರಣ ಬೇರೆ ದಾರಿ ಇಲ್ಲದೆ ಖಾಸಗಿ ಶಾಲೆಗೇ ಕಲಿಸುತ್ತಿದ್ದರು. ಆದರೆ ವಾಟ್ಸ್ ಅಪ್ ಗ್ರೂಪ್ ನ ಇಚ್ಛಾಶಕ್ತಿಯಿಂದ ಈಗ ಸರ್ಕಾರಿ ಶಾಲೆಯ ಚಿತ್ರಣ ಬದಲಾವಣೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


