ಕಾಶ್ಮೀರ ಗಲಭೆ; ಕಣಿವೆ ರಾಜ್ಯಕ್ಕೆ ಪೆಟ್ರೋಲ್ ಸಾಗಣೆ ಸ್ಥಗಿತ!
ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ನಡುವೆ ಕಣಿವೆ ರಾಜ್ಯಕ್ಕೆ ಮತ್ತೊಂದು ಅಘಾತಾಕಾರಿ ಸುದ್ದಿ ಎದುರಾಗಿದ್ದು, ಇಂದಿನಿಂದಲೇ ಪೆಟ್ರೋಲ್ ಸಾಗಣೆ ಸ್ಥಗಿತ ಮಾಡಲಾಗಿದೆ.

ಶ್ರೀನಗರ: ಉಗ್ರ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಈ ನಡುವೆ ಕಣಿವೆ ರಾಜ್ಯಕ್ಕೆ ಮತ್ತೊಂದು ಅಘಾತಾಕಾರಿ ಸುದ್ದಿ ಎದುರಾಗಿದ್ದು, ಇಂದಿನಿಂದಲೇ ಪೆಟ್ರೋಲ್ ಸಾಗಣೆ ಸ್ಥಗಿತ ಮಾಡಲಾಗಿದೆ.
ಮೂಲಗಳ ಪ್ರಕಾರ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ಪ್ರತಿಭಟನಾಕಾರರು ರಾಜ್ಯಕ್ಕೆ ಆಗಮಿಸುತ್ತಿರುವ ಪೆಟ್ರೋಲ್ ಟ್ಯಾಂಕರ್ ಗಳ ಮೇಲೆ ದಾಳಿ ಮಾಡುತ್ತಿದ್ದು, ಇದರಿಂದಾಗಿ ಕಣಿವೆ ರಾಜ್ಯದ ಪೆಟ್ರೋಲ್ ಸಾಗಣೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಪ್ರತಿಭಟನಾಕಾರರ ದಾಳಿಯಿಂದಾಗಿ ಹಲವು ಟ್ಯಾಂಕರ್ ಗಳು ಜಖಂಗೊಂಡಿದ್ದು, ಟ್ಯಾಂಕರ್ ಮಾಲೀಕರಿಗೆ ಸಾಕಷ್ಟು ನಷ್ಟವಾಗಿದೆ. ಈ ಹಿನ್ನಲೆಯಲ್ಲಿ ಟ್ಯಾಂಕರ್ ಮಾಲೀಕರು ಕಾಶ್ಮೀರದಲ್ಲಿ ಪೆಟ್ರೋಲ್ ಸಾಗಣೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಕಾಶ್ಮೀರ ಪೆಟ್ರೋಲ್ ಟ್ಯಾಂಕರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಆನಂದ್ ಶರ್ಮಾ ಅವರು ತಿಳಿಸಿರುವಂತೆ, ಪ್ರತಿಭಟನಾಕಾರರು ಟ್ಯಾಂಕರ್ ಚಾಲಕರನ್ನು ಹಾಗೂ ಕ್ಲೀನರ್ ಗಳನ್ನು ಮನಬಂದಂತೆ ಥಳಿಸುತ್ತಿದ್ದು, ಟ್ಯಾಂಕರ್ ಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಇಲ್ಲಿ ಕರ್ತವ್ಯ ನಿರ್ವಹಿಸುವುದೇ ದುಸ್ತರವೆನಿಸುತ್ತಿದೆ. ಇಂದಿನಿಂದಲೇ ಕಾಶ್ಮೀರದಲ್ಲಿ ಪೆಟ್ರೋಲ್ ಟ್ಯಾಂಕರ್ ಗಳ ಸೇವೆ ಸ್ಥಗಿತಗೊಳ್ಳಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಪ್ರಸ್ತುತ ಹಿಂಸಾಚಾರದಲ್ಲಿ ನಲುಗುತ್ತಿರುವ ಕಾಶ್ಮೀರದಲ್ಲಿ ಪೆಟ್ರೋಲ್ ಭವಣೆ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


