ಬ್ರಿಕ್ಸ್ ಸಮ್ಮೇಳನ: ಗೋವಾ ಸಿಎಂ ಅವರನ್ನು ಭೇಟಿ ಮಾಡಲಿರುವ ಚೀನಾ ವಿದೇಶಾಂಗ ಸಚಿವ
ಆಗಸ್ಟ್ 12 ರಂದು ಭಾರತಕ್ಕೆ ಆಗಮಿಸಲಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಚರ್ಚಿಸಲಿದ್ದಾರೆ.

ಪಣಜಿ: ಆಗಸ್ಟ್ 12 ರಂದು ಭಾರತಕ್ಕೆ ಆಗಮಿಸಲಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬ್ರಿಕ್ಸ್ ಸಮ್ಮೇಳನದ ಬಗ್ಗೆ ಚರ್ಚಿಸಲಿದ್ದಾರೆ. ಅಕ್ಟೊಬರ್ ನಲ್ಲಿ ನಡೆಯಲಿರುವ 8ನೇ ಬ್ರಿಕ್ಸ್ ಸಮ್ಮೇಳನವನ್ನು ಗೋವಾ ಸರ್ಕಾರ ಆಯೋಜಿಸುತ್ತಿದ್ದು, ಈ ಬಗ್ಗೆ ಗೋವಾ ಸಿಎಂ ಲಕ್ಷ್ಮಿ ಕಾಂತ್ ಪರ್ಸೆಕರ್ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಭದ್ರತೆಯನ್ನು ಪರಿಶೀಲಿಸಲು ಚೀನಾದ ವಿದೇಶಾಂಗ ಸಚಿವರು ಗೋವಾಗೆ ಆಗಮಿಸುತ್ತಿದ್ದಾರೆ ಎಂದು ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೆಕರ್ ತಿಳಿಸಿದ್ದಾರೆ.
ಬ್ರಿಕ್ಸ್ ಸಮ್ಮೇಳನದಲ್ಲಿ ಚೀನಾದ ಅಧ್ಯಕ್ಷರು ಭಾಗಿಯಾಗಲಿದ್ದು ಗೋವಾದಲ್ಲಿ ಸಿದ್ಧತೆ ಭರದಿಂದ ಸಾಗಿದ್ದು, ಚೀನಾ ವಿದೇಶಾಂಗ ಸಚಿವ ಗೋವಾದ ರಾಜ್ಯಪಾಲರನ್ನು ಸಹ ಭೇಟಿ ಮಾಡಲಿದ್ದಾರೆ. ಆಗಸ್ಟ್.13 ರಂದು ಚೀನಾದ ವಿದೇಶಾಂಗ ಸಚಿವರು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


