ದೇಶ

ಸಿಯಾಚಿನ್ ನಲ್ಲಿ ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಲಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಜವಳಿ ಖಾತೆಯ ಸಚಿವೆ ಸ್ಮೃತಿ ಇರಾನಿ ಪ್ರಪಂಚದ ಪ್ರಪಂಚದ ಅತಿ ಎತ್ತರದ ಯುದ್ದಭೂಮಿಯಾದ ಸಿಯಾಚಿನ್ ನಲ್ಲಿ ರಕ್ಷಾಬಂಧನವನ್ನು ಆಚರಿಸಲಿದ್ದಾರೆ.

ಸಿಯಾಚಿನ್ ನಲ್ಲಿ ಯೋಧರೊಂದಿಗೆ ರಕ್ಷಾ ಬಂಧನ ಆಚರಿಸಲಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Published On :

ನವದೆಹಲಿ: ಕೇಂದ್ರ ಜವಳಿ ಖಾತೆಯ ಸಚಿವೆ ಸ್ಮೃತಿ ಇರಾನಿ ಪ್ರಪಂಚದ ಪ್ರಪಂಚದ ಅತಿ ಎತ್ತರದ ಯುದ್ದಭೂಮಿಯಾದ ಸಿಯಾಚಿನ್ ನಲ್ಲಿ ರಕ್ಷಾಬಂಧನವನ್ನು ಆಚರಿಸಲಿದ್ದಾರೆ.

ಎನ್ ಡಿ ಟಿವಿ ವರದಿಯ ಪ್ರಕಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಯಾಚಿನ್ ನಲ್ಲಿ ಮುಂದಿನ ವಾರ ಯೋಧರೊಂದಿಗೆ ರಕ್ಷಾ ಬಂಧನವನ್ನು ಆಚರಿಸಲಿದ್ದು, ಇದಕ್ಕೆ ರಕ್ಷಣಾ ಸಚಿವರ ಅನುಮತಿಯೂ ಸಿಕ್ಕಿದೆ ಎಂದು ತಿಳಿದುಬಂದಿದೆ. ಸ್ಮೃತಿ ಇರಾನಿ ಅವರಂತೆಯೇ ಬಿಜೆಪಿಯ ಉಳಿದ 8 ಮಹಿಳಾ ಸಚಿವರು ರಾಜಸ್ತಾನ, ಈಶಾನ್ಯ ರಾಜ್ಯ ಹಾಗೂ ಕಾಶ್ಮೀರ ಸೇರಿದಂತೆ ಭಾರತದ ಗಡಿ ಭಾಗಗಳಲ್ಲಿ ಯೋಧರೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಿದ್ದಾರೆ. 
ಸ್ಮೃತಿ ಇರಾನಿ ಅವರು ಇತ್ತೀಚೆಗಷ್ಟೇ ಭದ್ರತೆ ಇಲ್ಲದೆ ಸ್ಟಾರ್ ಬಕ್ಸ್ ಕಾಫಿ ಶಾಪ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಈಗ ಪ್ರಪಂಚದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ನಲ್ಲಿ ರಕ್ಷಾಬಂಧನವನ್ನು ಆಚರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.