ಸೈನಿಕರಿಗೆ ಬಂಪರ್ ಆಫರ್: ನವವಿವಾಹಿತರಿಗೆ ಪತ್ನಿ ಜೊತೆ ಇರಲು ಅವಕಾಶ
ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಗಡಿ ಕಾಯುವ ನವವಿವಾಹಿತ ಯೋಧರು ಪತ್ನಿ ಜತೆ ಇರಲು ಬಿಎಸ್‌ಎಫ್ ...

ಜೈಸಲ್ಮೇರ್: ಅಂತಾರಾಷ್ಟ್ರೀಯ ಗಡಿ ಕಾಯುವ ದೇಶದ ಯೋಧರಿಗೆ ಇಲ್ಲೊಂದು ಖುಷಿಯ ವಿಚಾರವಿದೆ. ಗಡಿ ಕಾಯುವ ನವವಿವಾಹಿತ ಯೋಧರು ಪತ್ನಿ ಜತೆ ಇರಲು ಬಿಎಸ್‌ಎಫ್ ಅವಕಾಶ ಕಲ್ಪಿಸಲು ನಿರ್ಧರಿಸಿದೆ.
ಈ ಸಂಬಂಧ ಮಾತನಾಡಿದ ಬಿಎಸ್‌ಎಫ್ ಡಿಜಿ ಕೆ.ಕೆ ಶರ್ಮ ಅಂತಾರಾಷ್ಟ್ರೀಯ ಗಡಿ ಕಾಯುವ ಯೋಧರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸುವ ಜತೆಗೆ ಮನೆಯ ವಾತಾವರಣ ಕಲ್ಪಿಸುವ ಬಗ್ಗೆಯೂ ಬಿಎಸ್‌ಎಫ್ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಿರುವುದಾಗಿತಿಳಿಸಿದ್ದಾರೆ.
ಸೈನಿಕರು ವಿವಾಹವಾದ ಕೂಡಲೇ ವಾಪಸಾಗಿ ಕರ್ತವ್ಯಕ್ಕೆ ನಿಯೋಜನೆಗೊಳ್ಳುತ್ತಿರುವ ಬಗ್ಗೆ ಬಹಳ ದಿನಗಳಿಂದಲೂ ಅಸಮಾಧಾನ ಇತ್ತು. ಜೊತೆಗೆ ಕುಟುಂಬದಿಂದ ದೂರ ಇರುವ ನೋವು ಅವರ ಕೆಲಸದ ಮೇಲೆ ಅಡ್ಡಪರಿಣಾಮ ಬೀರುವುದು ಎಂದು ಹೇಳಿದ್ದಾರೆ.
ಹೊಸ ನಿಯಮ ಆರಂಭಿಕ ಹಂತದಲ್ಲಿದ್ದು, ಗಡಿ ಔಟ್‌ಪೋಸ್ಟ್‌ಗಳಲ್ಲಿರುವ ನವ ವಿವಾಹಿತ ಯೋಧರ ಜತೆ ಪತ್ನಿಯೂ ಒಂದು ವರ್ಷ ಇರಲು ಅವಕಾಶ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ ಅವರಿಗೆ ವಸತಿ ಸೌಕರ್ಯ ಹೆಚ್ಚಿಸುವ ಕೆಲಸ ನಡೆಯುತ್ತಿದೆ. ಕುಟುಂಬದ ಜತೆ ಇರುವುದರಿಂದ ಯೋಧರ ಕಾರ್ಯಕ್ಷತೆ ಹೆಚ್ಚುವುದು,' ಎಂದು ಬಿಎಸ್‌ಎಫ್ ಐಜಿ ಬಿ ಆರ್. ಮೇಘ್ವಾಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


