ರಾಹುಲ್‌ಗಾಂಧಿಯ ಕ್ಷೇತ್ರದಲ್ಲಿ ಪಂಚಾಯತ್ ಘರ್, ಸಾರ್ವಜನಿಕ ಶೌಚಾಲಯಗಳೇ ಇಲ್ಲ!
ಅಮೇಥಿಯ ಮುಕ್ದಾಂಪುರ್ ಗ್ರಾಮಕ್ಕೆ ಸ್ಮೃತಿಯವರು ಭೇಟಿ ನೀಡಿದ್ದು ಆ ಗ್ರಾಮದಲ್ಲಿ ಪಂಚಾಯತ್ ಘರ್ ಇಲ್ಲ ಎಂದು ಟ್ವೀಟ್...

Published On :
ಅಮೇಥಿ: ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಭಾನುವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿಯವರ ಲೋಕಸಭಾ ಕ್ಷೇತ್ರವಾದ ಅಮೇಥಿಗೆ ಭೇಟಿ ನೀಡಿದ್ದಾರೆ.
ಅಮೇಥಿಯ ಮುಕ್ದಾಂಪುರ್ ಗ್ರಾಮಕ್ಕೆ ಸ್ಮೃತಿಯವರು ಭೇಟಿ ನೀಡಿದ್ದು ಆ ಗ್ರಾಮದಲ್ಲಿ ಪಂಚಾಯತ್ ಘರ್ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ .
ತಮ್ಮ ಭೇಟಿಯ ಬಗ್ಗೆ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿದ ಸ್ಮೃತಿ ಮುಕ್ದಾಂಪುರ್ ಗ್ರಾಮದ ಪ್ರಧಾನ್ ಭಾಗ್ಯವತಿ ಅವರನ್ನು ಭೇಟಿ ಮಾಡಿದೆ. ಆಗಲೇ ಗೊತ್ತಾಗಿದ್ದು ಅಲ್ಲಿ ಪಂಚಾಯತ್ ಘರ್ ಇಲ್ಲ ಎಂಬುದು ಎಂದು ಟ್ವೀಟಿಸಿದ್ದಾರೆ.
ಸಾರ್ವಜನಿಕ ಶೌಚಾಲಯವೂ ಇಲ್ಲ
ಈ ಗ್ರಾಮದಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸಾರ್ವಜನಿಕ ಶೌಚಾಲಯವೂ ಇಲ್ಲ ಎಂಬುದು ತಿಳಿದು ಬಂದಿದೆ ಎಂದು ಹೇಳಿದ ಸ್ಮೃತಿ ಇರಾನಿ, ಅಲ್ಲಿ ಪಂಚಾಯತ್ ಘರ್ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ.
ಅದೇ ವೇಳೆ ಅಲ್ಲಿನ ಗ್ರಾಮಸ್ಥರು ನರೇಂದ್ರ ಮೋದಿಯವರ ಗ್ರಾಮ್ ಉದಯ್ ಸೆ ಭಾರತ್ ಉದಯ್ ಅಭಿಯಾನದ ಮಾತುಗಳನ್ನು ಆಲಿಸುತ್ತಿರುವ ಚಿತ್ರವನ್ನೂ ಸ್ಮೃತಿ ಟ್ವೀಟ್ ಮಾಡಿದ್ದಾರೆ.
2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದು ಸ್ಮೃತಿ ಇರಾನಿ ಪರಾಭವಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


