ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ಕಾಪಾಡಲು ಭಾರತ ವೀಸಾ ನಿರಾಕರಣೆ: ದೋಲ್ಕುನ್ ಇಸಾ
ದ್ವಿಪಕ್ಷೀಯ ಸಂಬಂಧ ಉಳಿಸಿಕೊಳ್ಳುವ ಭಾಗದ ಕಾರ್ಯತಂತ್ರವಾಗಿ ವೀಸಾ ನಿರಾಕರಣೆ ಮಾಡಿದೆ ಎಂದು ಉಯ್ಘರ್ ಸಮುದಾಯದ ಸಂಘಟನಾಕಾರ ದೋಲ್ಕುನ್ ಇಸಾ ಹೇಳಿದ್ದಾರೆ.

ನವದೆಹಲಿ: ಧರ್ಮಶಾಲಾದಲ್ಲಿ ಈ ತಿಂಗಳ ಅಂತ್ಯಕ್ಕೆ ನಡೆಯಲಿರುವ ವಿಶ್ವ ಉಯ್ಫರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಲು ಭಾರತ ಸರ್ಕಾರ ತಮಗೆ ವೀಸಾ ನಿರಾಕರಣೆ ಮಾಡಿರುವುದರ ಬಗ್ಗೆ ಉಯ್ಘರ್ ಸಮುದಾಯದ ಸಂಘಟನಾಕಾರ ದೋಲ್ಕುನ್ ಇಸಾ ಪ್ರತಿಕ್ರಿಯಿಸಿದ್ದು ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ಉಳಿಸಿಕೊಳ್ಳುವ ಭಾಗದ ಕಾರ್ಯತಂತ್ರವಾಗಿ ವೀಸಾ ನಿರಾಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವೀಸಾ ನಿರಾಕರಣೆ ಬೆಳವಣಿಗೆ ಬಗ್ಗೆ ಎಎನ್ ಐ ಗೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿರುವ ದೋಲ್ಕುನ್ ಇಸಾ, "ಭಾರತಕ್ಕೆ ಭೇಟಿ ನೀಡುವುದು ತಮ್ಮ ಕನಸುಗಳಲ್ಲಿ ಒಂದಾಗಿತ್ತು. ಭಾರತದ ಸಂಸ್ಕೃತಿಯನ್ನು ಆಸ್ವಾದಿಸಲು ಕಾತುರದಿಂದ ಕಾಯುತ್ತಿದ್ದೆ. ಆದರೆ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ನನಗೆ ಭಾರತ ಸರ್ಕಾರ ವೀಸಾ ನಿರಾಕರಣೆ ಮಾಡಿದೆ ಎಂದು ಹೇಳಿದ್ದಾರೆ.
ವೀಸಾ ನಿರಾಕರಣೆ ಮಾಡಿರುವ ಭಾರತೀಯ ಅಧಿಕಾರಿಗಳ ಕ್ರಮದಿಂದ ನಿರಾಶೆಯಾಗಿದೆ ಎಂದು ದೋಲ್ಕುನ್ ಇಸಾ ತಿಳಿಸಿದ್ದಾರೆ. "ಚೀನಾದಲ್ಲಿರುವ ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕರ್ತರು ಹಾಗೂ ನಾಯಕರು ಉಯ್ಫರ್ ಕಾಂಗ್ರೆಸ್ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಚೀನಾ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವ ಸಮುದಾಯಗಳ ನಡುವೆ ವಿಚಾರ ವಿನಿಮಯಕ್ಕೆ ಉತ್ತಮ ವೇದಿಕೆಯಾಗಿದೆ" ಎಂದು ದೋಲ್ಕುನ್ ಇಸಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


