ದೇಶ

ಮಹಾರಾಷ್ಟ್ರದ ಬರ ಪೀಡಿತ ಗ್ರಾಮಗಳನ್ನು ಅಮೀರ್ ಖಾನ್ ದತ್ತು ತೆಗೆದುಕೊಂಡಿಲ್ಲ!

ಅಮೀರ್ ಖಾನ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಬರ ಪೀಡಿತ ತಾಲ್ ಮತ್ತು ಕೊರೆಗಾಂವ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು...

ಮಹಾರಾಷ್ಟ್ರದ ಬರ ಪೀಡಿತ ಗ್ರಾಮಗಳನ್ನು ಅಮೀರ್ ಖಾನ್ ದತ್ತು ತೆಗೆದುಕೊಂಡಿಲ್ಲ!
ಅಮೀರ್ ಖಾನ್
Published On :
ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಮಹಾರಾಷ್ಟ್ರದ ಬರ ಪೀಡಿತ ಎರಡು ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಮೀರ್ ಖಾನ್ ಅವರ ಆಪ್ತಮೂಲಗಳು ಈ ಸುದ್ದಿ ಸತ್ಯಕ್ಕೆ ದೂರವಾದುದು ಎಂದಿವೆ.
ಅಮೀರ್ ಖಾನ್ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಬರ ಪೀಡಿತ ತಾಲ್ ಮತ್ತು ಕೊರೆಗಾಂವ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಮೀರ್ ಆಪ್ತಮೂಲಗಳು ಆತ ಯಾವುದೇ ಗ್ರಾಮಗಳನ್ನು ದತ್ತು ತೆಗೆದುಕೊಂಡಿಲ್ಲ. ಆದರೆ ಪಾನಿ ಫೌಂಡೇಷನ್ ಎಂಬ ಎನ್‌ಜಿಒ ಜತೆ ಸೇರಿ ಬರಪೀಡಿತ ಪ್ರದೇಶಗಳಲ್ಲಿರುವ 120 ಗ್ರಾಮಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ ಎಂದಿವೆ.
ಆದಾಗ್ಯೂ, ಅಮೀರ್ ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂಬ ವದಂತಿ ಹಬ್ಬಿದ್ದು ಹೇಗೆ ಎಂಬುದು ತಿಳಿದು ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.