ದೇಶ

ಆರ್ ಎಸ್ ಎಸ್ ಸಿದ್ಧಾಂತ ದೇಶಕ್ಕೆ ಮಾರಕ: ನಿತೀಶ್ ಕುಮಾರ್

ಆರ್ ಎಸ್ ಎಸ್ ಸಿದ್ಧಾಂತ ದೇಶಕ್ಕೆ ಮಾರಕ ಎಂದು ಮತ್ತೆ ಹೇಳಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಲ ಬಿಜೆಪಿಯೇತರ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಲು ಸೋಮವಾರ

ಆರ್ ಎಸ್ ಎಸ್ ಸಿದ್ಧಾಂತ ದೇಶಕ್ಕೆ ಮಾರಕ: ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Published On :

ಪಾಟ್ನಾ: ಆರ್ ಎಸ್ ಎಸ್ ಸಿದ್ಧಾಂತ ದೇಶಕ್ಕೆ ಮಾರಕ ಎಂದು ಮತ್ತೆ ಹೇಳಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಲ್ಲ ಬಿಜೆಪಿಯೇತರ ಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಲು ಸೋಮವಾರ ಕರೆ ನೀಡಿದ್ದಾರೆ.

"ಆರ್ ಎಸ್ ಎಸ್ ಸಿದ್ಧಾಂತ ಒಳ್ಳೆಯದಲ್ಲ. ಇದು ದೇಶದ ಅಥವಾ ಜನರ ಹಿತಾಸಕ್ತಿಯನ್ನು ಕಾಯುವುದಿಲ್ಲ" ಎಂದು ಪ್ರತಿ ವಾರದ ಜನತಾ ದರ್ಬಾರ್ ಸಮಯದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ನಾನು ಯಾರೋ ಒಬ್ಬ ವ್ಯಕ್ತಿಯ ವಿರುದ್ಧವಾಗಿಲ್ಲ" ಎಂದಿರುವ ಅವರು "ನಾನು ಆರ್ ಎಸ್ ಎಸ್ ಸಿದ್ಧಾಂತವನ್ನು ವಿರೋಧಿಸುತ್ತೇನೆ" ಎಂದಿದ್ದಾರೆ.

ಸಂಘ ಮುಕ್ತ ಭಾರತದ ತುರ್ತು ಅವಶ್ಯಕತೆ ಇದೆ ಎಂದು ಜನತಾ ದಳ ಸಂಯುಕ್ತ ಪಕ್ಷದ ಅಧ್ಯಕ್ಷ ಮತ್ತೆ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷದ ವಿರುದ್ಧ ಎಲ್ಲ ಸಮಾನಮನಸ್ಕ ಪಕ್ಷಗಳು ಒಂದಾಗಬೇಕೆಂದು ಅವರು ಕರೆ ನೀಡಿದ್ದಾರೆ.  "ಎಲ್ಲ ಬಿಜೆಪಿಯೇತರ ಪಕ್ಷಗಳು ಮತ್ತು ಆರ್ ಎಸ್ ಎಸ್ ವಿರೋಧಿಸುವ ಎಲ್ಲರೂ ದೇಶದಾದ್ಯಂತ ಒಗ್ಗೂಡುವ ಸಮಯ ಬಂದಿದೆ. ಬಿಜೆಪಿ ಪಕ್ಷವನ್ನು ತಡೆಯುವುದೇ ನಮ್ಮ ಮುಖ್ಯ ಉದ್ದೇಶ" ಎಂದು ಅವರು ಹೇಳಿದ್ದಾರೆ.

ಸಮಾಜದಲ್ಲಿ ಒಡಕು ಬೀಜ ಬಿತ್ತುವುದರಲ್ಲಿ ಬಿಜೆಪಿ ನಿರತವಾಗಿದೆ ಎಂದು ಶನಿವಾರ ನಿತೀಶ್ ದೂರಿದ್ದರು. ಈ ಹಿಂದೆ ಬಿಜೆಪಿ ಪಕ್ಷದೊಡಗೂಡಿ ಅಧಿಕಾರ ನಡೆಸಿದ್ದರು ತಮ್ಮ ಸಿದ್ಧಾಂತವನ್ನು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.