ದೇಶ

ಅಮೆರಿಕಾದ ವೀಸಾ ಶುಲ್ಕ ಏರಿಕೆಯಲ್ಲಿ ತಾರತಮ್ಯ, ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ: ಅರುಣ್ ಜೇಟ್ಲಿ

ಅಮೆರಿಕ ವೀಸಾ ಶುಲ್ಕ ಏರಿಕೆಯ ಬಗ್ಗೆ ಭಾರತ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು ತಾರತಮ್ಯದಿಂದ ಕೂಡಿರುವ ವೀಸಾ ಶುಲ್ಕ ಏರಿಕೆ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಅಮೆರಿಕಾದ ವೀಸಾ ಶುಲ್ಕ ಏರಿಕೆಯಲ್ಲಿ ತಾರತಮ್ಯ, ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ: ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
Published On :

ವಾಶಿಂಗ್ ಟನ್: ಅಮೆರಿಕ ವೀಸಾ ಶುಲ್ಕ ಏರಿಕೆಯ ಬಗ್ಗೆ ಭಾರತ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದು ತಾರತಮ್ಯದಿಂದ ಕೂಡಿರುವ ವೀಸಾ ಶುಲ್ಕ ಏರಿಕೆ ಭಾರತೀಯ ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಯುಎಸ್ ನ ವಾಣಿಜ್ಯ ಪ್ರತಿನಿಧಿ ರಾಯಭಾರಿ ಮೈಕೆಲ್ ಫ್ರೋಮಾನ್ ನೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ಅಮೆರಿಕಾದಲ್ಲಿರುವ ಭಾರತೀಯ ಉದ್ಯೋಗಿಗಳಿಗೆ  ನೆರವಾಗುವ ಹಕ್ಕುಗಳ ಬಗ್ಗೆ ಶೀಘ್ರವೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿರುವ ಅಗತ್ಯತೆಯನ್ನು ಒತ್ತಿಹೇಳಿದ್ದಾರೆ.
ಇದೇ ವೇಳೆ ಹೆಚ್ 1 ಬಿ ಹಾಗೂ ಎಲ್ 1 ವೀಸಾ ಶುಲ್ಕ ಏರಿಕೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜೇಟ್ಲಿ, ಶುಲ್ಕ ಏರಿಕೆ ತಾರತಮ್ಯದಿಂದ ಕೂಡಿದ್ದೂ ಭಾರತೀಯ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಅಮೆರಿಕ ಕಾಂಗ್ರೆಸ್ ಹೆಚ್ 1 ಬಿ ಮೇಲೆ 4 ,500 ಯುಎಸ್ ಡಾಲರ್ ನಷ್ಟು ವಿಶೇಷ ಶುಲ್ಕ ವಿಧಿಸಿತ್ತು. ಶುಲ್ಕ ಏರಿಕೆ ವಿಷಯದೊಂದಿಗೆ ಭಾರತೀಯ ಉದ್ಯೋಗಿಗಳಿಗೆ  ನೆರವಾಗುವ ಹಕ್ಕುಗಳ ಒಪ್ಪಂದದ ಬಗ್ಗೆ ಶೀಘ್ರವೇ ಎರಡೂ ರಾಷ್ಟ್ರಗಳು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಜೇಟ್ಲಿ ವಾಣಿಜ್ಯ ಪ್ರತಿನಿಧಿ ರಾಯಭಾರಿ ಮೈಕೆಲ್ ಫ್ರೋಮಾನ್ ಗೆ ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.