ದೇಶ

ಕಾಡು ಅಣಬೆ ಸೇವನೆ ಪರಿಣಾಮ ಮಿಜೋರಾಂ ನಲ್ಲಿ ಮೂವರ ಸಾವು

ಮಿಜೋರಾಂ ನಲ್ಲಿ ಕಾಡು ಅಣಬೆ ಸೇವನೆ ಮಾಡಿದ ಓರ್ವ ಬಾಲಕ ಸೇರಿದಂತೆ ಮೂರ್ವರು ಸಾವನ್ನಪ್ಪಿದ್ದರೆ, ನಾಲ್ವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಡು ಅಣಬೆ ಸೇವನೆ ಪರಿಣಾಮ ಮಿಜೋರಾಂ ನಲ್ಲಿ ಮೂವರ ಸಾವು
ಕಾಡು ಅಣಬೆ ಸೇವನೆ ಪರಿಣಾಮ ಮಿಜೋರಾಂ ನಲ್ಲಿ ಮೂವರ ಸಾವು
Published On :

ಐಜ್ವಾಲ್: ಮಿಜೋರಾಂ ನಲ್ಲಿ ಕಾಡು ಅಣಬೆ ಸೇವನೆ ಮಾಡಿದ ಓರ್ವ ಬಾಲಕ ಸೇರಿದಂತೆ ಮೂರ್ವರು ಸಾವನ್ನಪ್ಪಿದ್ದರೆ, ನಾಲ್ವರು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಮಿಟ್ ಜಿಲ್ಲೆಯಲ್ಲಿ ಒಂದೇ ಕುಟುಂಬದವರು ಕಾಡು ಅಣಬೆ ಸೇವಿಸಿದ್ದು ಮೂವರು ಮೃತಪಟ್ಟಿದ್ದಾರೆ ಇಬ್ಬರು ಮಕ್ಕಳು, ಓರ್ವ ಮಹಿಳೆ ಹಾಗೂ ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.   
ಅಣಬೆಗಳನ್ನು ಕಾಡಿನಿಂದ ತರಲಾಗಿತ್ತು, ಬಹುಶಃ ಅದು ವಿಷಯಕಾರಿಯಾಗಿರಬೇಕು ಇಲ್ಲವೇ ಸರಿಯಾಗಿ ಬೇಯಿಸದ ಕಾರಣ ಈ ಅವಗಢ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ 8 ವರ್ಷದ ಒಂದು ಮತ್ತು, 10 ವರ್ಷದ ಒಬ್ಬ ಬಾಲಕ ಮತ್ತು 34ರ ಹರೆಯದ ಯುವಕ ಸೇರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.