'ನಾನು ಕಾನೂನುಬದ್ಧ ನಾಗರಿಕ, ತೆರಿಗೆ ಇಲಾಖೆಗೆ ಸಹಕರಿಸುತ್ತೇನೆ': ಬಿಗ್ ಬಿ
ತಾವು ಈ ದೇಶದ ನ್ಯಾಯಬದ್ಧ ನಾಗರಿಕನಾಗಿದ್ದು ಆದಾಯ ತೆರಿಗೆ ಇಲಾಖೆಯೊಂದಿಗೆ ಸಹಕರಿಸುವುದಾಗಿ...

ಮುಂಬೈ: ತಾವು ಈ ದೇಶದ ನ್ಯಾಯಬದ್ಧ ನಾಗರಿಕನಾಗಿದ್ದು ಆದಾಯ ತೆರಿಗೆ ಇಲಾಖೆಯೊಂದಿಗೆ ಸಹಕರಿಸುವುದಾಗಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನದ ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಆರೇಳು ವರ್ಷಗಳಿಂದ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ ಎಂದರು.
ನಾನು ತುಂಬಾ ಶ್ರದ್ಧೆಯಿಂದ ಇಲಾಖೆ ಕೇಳಿದ ಪ್ರಶ್ನೆಗಳಿಗೆ ಮತ್ತು ನೊಟೀಸುಗಳಿಗೆ ಉತ್ತರಿಸುತ್ತಾ ಬಂದಿದ್ದೇನೆ. ನಾನು ಈ ದೇಶದ ಕಾನೂನುಬದ್ಧ ನಾಗರಿಕ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.ಪನಾಮಾದಲ್ಲಿ ಯಾವುದೇ ಕಂಪೆನಿಯ ಭಾಗವಾಗಿರುವುದನ್ನು ಮತ್ತೊಮ್ಮೆ ಬಚ್ಚನ್ ನಿರಾಕರಿಸಿದರು.
ಪನಾಮಾ ಪೇಪರ್ಸ್ ವರದಿಯಲ್ಲಿ ಉಲ್ಲೇಖಿಸಿದ 4 ಕಂಪೆನಿಗಳ ಯಾವ ಕಂಪೆನಿಯ ನಿರ್ದೇಶಕನೂ ನಾನಾಗಿಲ್ಲ ಎಂದು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ಭಾರತ ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಲು ಆದೇಶ ನೀಡಿರುವುದು ಖುಷಿಯ ಸಂಗತಿ. ನಾಲ್ಕು ಕಂಪೆನಿಗಳಲ್ಲಿ ನನ್ನ ಹೆಸರು ಹೇಗೆ ಬಂತು ಎಂದು ತಿಳಿದುಕೊಳ್ಳಲು ನಾನು ಕೂಡ ಕುತೂಹಲಕ್ಕೊಳಗಾಗಿದ್ದೇನೆ ಎಂದು ಬಚ್ಚನ್ ಹೇಳಿದ್ದಾರೆ.
ನನ್ನ ಹೆಸರು ಪನಾಮಾ ಪೇಪರ್ಸ್ ವರದಿಯಲ್ಲಿ ಕೇಳಿಬಂದಿರುವುದರಿಂದ ಅವರನ್ನು ಸೇವ್ ಟೈಗರ್ಸ್ ಪ್ರಚಾರ ರಾಯಭಾರಿಯಿಂದ ಕೆಳಗಿಳಿಸಬೇಕು ಎಂದು ಮಹಾರಾಷ್ಟ್ರ ಸರ್ಕಾರವನ್ನು ವಿರೋಧ ಪಕ್ಷದವರು ಒತ್ತಾಯಿಸಿದ್ದನ್ನು ನಾನು ಕೇಳಿದ್ದೇನೆ. ನನ್ನನ್ನು ರಾಯಭಾರಿಯನ್ನಾಗಿ ಉಳಿಸಿಕೊಳ್ಳುವ ಅಥವಾ ಬಿಡುವ ವಿಶೇಷ ಹಕ್ಕು ಸರ್ಕಾರಕ್ಕಿದೆ. ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಸಹ ಅದನ್ನು ನಾನು ವಿನಯದಿಂದ ಸ್ವೀಕರಿಸುತ್ತೇನೆ ಎಂದರು.
ನಾನು ಇನ್ನು ಮುಂದೆಯೂ ಸಾಮಾಜಿಕ ಕಾಳಜಿಯ ಕೆಲಸಗಳನ್ನು ಮುಂದುವರಿಸುತ್ತೇನೆ. ಹುಲಿ ಸಂರಕ್ಷಣೆ, ಪೋಲಿಯೋ, ಸ್ವಚ್ಛ ಭಾರತ, ಟಿಬಿ, ಹೆಪಟೈಟಿಸ್ ಬಿ, ಡಯಾಬಿಟಿಸ್, ಕುಟುಂಬ ಯೋಜನೆ ಮೊದಲಾದವುಗಳ ಪರ ಮುಂದೆಯೂ ನನ್ನ ಸ್ವ ಹಿತಾಸಕ್ತಿ ಮತ್ತು ಸ್ವ ಸಾಮರ್ಥ್ಯದಿಂದ ಕೆಲಸ ಮಾಡುತ್ತೇನೆ, ಅದನ್ನು ಬಿಡುವುದಿಲ್ಲ ಎಂದು ಬಿಗ್ ಬಿ ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


