ರಕ್ಷಣಾ ಸಚಿವ ಪರಿಕ್ಕರ್ ವಿರುದ್ಧ ಗೋವಾ ಆರ್ ಎಸ್ ಎಸ್ ಮುಖಂಡ ವೆಲಿಂಗ್ಕರ್ ಅಸಮಾಧಾನ
ಗೋವಾ ಆರ್ ಎಸ್ ಎಸ್ ಮುಖಂಡ ಸುಭಾಷ್ ವೆಲಿಂಗ್ಕರ್, ಬಿಜೆಪಿ ಸರ್ಕಾರ ಹಾಗೂ ಗೋವಾ ಮಾಜಿ ಸಿಎಂ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಣಜಿ: ಗೋವಾ ಆರ್ ಎಸ್ ಎಸ್ ಮುಖಂಡ ಸುಭಾಷ್ ವೆಲಿಂಗ್ಕರ್, ಬಿಜೆಪಿ ಸರ್ಕಾರ ಹಾಗೂ ಗೋವಾ ಮಾಜಿ ಸಿಎಂ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗೋವಾ ಜನತೆ ಬೆನ್ನಿಗೆ ಚೂರಿ ಹಾಕಿರುವ ಮನೋಹರ್ ಪರಿಕ್ಕರ್, ಬಾಯಲ್ಲಿ ರಾಮನಾಮ ಬಗಲಲ್ಲಿ ಚೂರಿ(ಅಪ್ರಾಮಾಣಿಕ ವ್ಯಕ್ತಿಯಂತೆ) ಎಂಬಂತೆ ನಡೆದುಕೊಂಡಿದ್ದಾರೆ ಎಂದು ವೆಲಿಂಗ್ಕರ್ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಚರ್ಚ್ ಗಳಿಂದ ನಡೆಸಲಾಗುತ್ತಿರುವ ಆಂಗ್ಲ ಶಾಲೆಗಳಿಗೆ ಅನುದಾನ ನಿಡುವ ವಿಷಯದಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಆರೋಪ ಕೇಳಿಬಂದಿದೆ.
ಮನೋಹರ್ ಪರಿಕ್ಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಸುಭಾಷ್ ವೆಲಿಂಗ್ಕರ್, 2011 ರಲ್ಲಿ ಮನೋಹರ್ ಪರಿಕ್ಕರ್ ವಿಪಕ್ಷ ನಾಯಕರಾಗಿದ್ದಾಗ ಚರ್ಚ್ ಗಳಿಂದ ನಡೆಸಲ್ಪಡುತ್ತಿದ್ದ ಆಂಗ್ಲ ಮಾಧ್ಯಮಗಳಿಗೆ ಅನುದಾನ ನೀಡುವುದನ್ನು ವಿರೋಧಿಸಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ್ದು, ಮನೋಹರ್ ಪರಿಕ್ಕರ್ ವಿಪಕ್ಷ ನಾಯಕರಾಗಿದ್ದಾಗ ಮಾಡಿದ್ದ ಭಾಷಣದಲ್ಲಿ ಅನುದಾನ ನೀಡುವುದನ್ನು ವಿರೋಧಿಸಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ಅವರೂ ಹಿಂದಿನ ಸರ್ಕಾರದಂತೆಯೇ ನಡೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನೋಹರ್ ಪರಿಕ್ಕರ್ ಅವರದ್ದೇ ಭಾಷಣದ ವಿರುದ್ಧ ನಡೆದುಕೊಂಡಿದ್ದಾರೆ, ಹಿಂದಿನ ಸರ್ಕಾರಗಳು ನೀಡುತ್ತಿದ್ದ ಅನುದಾನವನ್ನು ಅವರೂ ಮುಂದುವರೆಸಿದ್ದಾರೆ. ಈ ಮೂಲಕ ಬಿಜೆಪಿ ಗೋವಾ ಸಂಸ್ಕೃತಿ ನಾಶ ಮಾಡಲು ಹಿಂದಿನ ಸರ್ಕಾರಗಳಂತೆಯೇ ಯತ್ನಿಸುತ್ತಿದ್ದು ಬಿಜೆಪಿ, ಮನೋಹರ್ ಪರಿಕ್ಕರ್ ಗೋವಾ ಜನತೆಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ವೆಲಿಂಗ್ಕರ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


