ದೇಶ

ವ್ರತಭಂಗ ಕಾರಣ: ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಶ್ರೀ ಗೈರು

ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ರಾಘವೇಶ್ವರ ಶ್ರೀ ನಿರ್ಧಾರಿಸಿದ್ದಾರೆ ಎಂದು ಬೆಂಗಳೂರಲ್ಲಿ ಮಠದ...

ವ್ರತಭಂಗ ಕಾರಣ: ವೈದ್ಯಕೀಯ ಪರೀಕ್ಷೆಗೆ ರಾಘವೇಶ್ವರ ಶ್ರೀ ಗೈರು
ರಾಘವೇಶ್ವರ ಸ್ವಾಮೀಜಿ
Published On :
ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗದಿರಲು ರಾಘವೇಶ್ವರ ಶ್ರೀ ನಿರ್ಧಾರಿಸಿದ್ದಾರೆ ಎಂದು ಬೆಂಗಳೂರಲ್ಲಿ ಮಠದ ಕಾರ್ಯದರ್ಶಿ ಡಾ.ಕೃಷ್ಣ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಶ್ರೀಗಳು ಚಾತುರ್ಮಾಸ ವ್ರತದಲ್ಲಿದ್ದು, ವೈದ್ಯಕೀಯ ಪರೀಕ್ಷೆಗೆ ಬಂದರೆ ಶ್ರೀಗಳ ವ್ರತಭಂಗವಾಗುತ್ತೆ ಆ ಕಾರಣಕ್ಕೆ ಮೆಡಿಕಲ್ ಟೆಸ್ಟ್​ಗೆ ಶ್ರೀಗಳು ಬರುವುದಿಲ್ಲ ಎಂದು ರಾಘವೇಶ್ವರ ಸ್ವಾಮೀಜಿ ಪರ ಮಠಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. 
ಚಾತುರ್ಮಾಸ ವ್ರತದಲ್ಲಿ ಶ್ರೀಗಳು 60 ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಿ ದೈಹಿಕವಾಗಿ ಬಳಲಿದ್ದಾರೆ ಈ ಹಿನ್ನೆಲೆ ರಾಘವೇಶ್ವರ ಶ್ರೀಗಳು ವಿಶ್ರಾಂತಿ ಪಡೆಯಲಿದ್ದಾರೆ ಎಂದಿದ್ದಾರೆ. 
ಈಗಾಗಲೇ ನಾವು ಕಾನೂನು ಸಲಹೆ ಪಡೆದುಕೊಂಡಿದ್ದೇವೆ ಎಂದಿರುವ ಅವರು, ಮುಂದಿನ ದಿನಗಳಲ್ಲಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ ಪಕ್ಷದಲ್ಲಿ ಮತ್ತೆ ಕಾನೂನು ಸಲಹೆ ಪಡೆದು ಪರೀಕ್ಷೆಗೆ ಹಾಜರಾಗುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.