ಹಿರಿಯರಿಗೆ ಉಚಿತ ತಿರುಪತಿ, ರಾಮೇಶ್ವರ ಯಾತ್ರೆ ಘೋಷಿಸಿದ ಉ.ಪ್ರ ಸರ್ಕಾರ
ವಿಧಾನಸಭಾ ಚುನಾವಣೆ ಹತ್ತಿರು ಬರುತ್ತಿರುವ ಸಲುವಾಗಿ ಸ್ಥಳೀಯ ನಾಗರೀಕರ ಗಮನ ಸೆಳೆಯಲು ಯತ್ನ ನಡೆಸಲು ಮುಂದಾಗಿರುವ ಉತ್ತರ ಪ್ರದೇಶದ ಸರ್ಕಾರ ಇದೀಗ ಅಲ್ಲಿನ ಹಿರಿಯ ನಾಗರೀಕರಿಗೆ ಉಚಿತ ತಿರುಪತಿ ಹಾಗೂ ರಾಮೇಶ್ವರ ಯಾತ್ರೆ ಸೌಲಭ್ಯ ಒದಗಿಸುವುದಾಗಿ ಬುಧವಾರ ಘೋಷಣೆ ಮಾಡಿದೆ...

ಲಖನೌ: ವಿಧಾನಸಭಾ ಚುನಾವಣೆ ಹತ್ತಿರು ಬರುತ್ತಿರುವ ಸಲುವಾಗಿ ಸ್ಥಳೀಯ ನಾಗರೀಕರ ಗಮನ ಸೆಳೆಯಲು ಯತ್ನ ನಡೆಸಲು ಮುಂದಾಗಿರುವ ಉತ್ತರ ಪ್ರದೇಶದ ಸರ್ಕಾರ ಇದೀಗ ಅಲ್ಲಿನ ಹಿರಿಯ ನಾಗರೀಕರಿಗೆ ಉಚಿತ ತಿರುಪತಿ ಹಾಗೂ ರಾಮೇಶ್ವರ ಯಾತ್ರೆ ಸೌಲಭ್ಯ ಒದಗಿಸುವುದಾಗಿ ಬುಧವಾರ ಘೋಷಣೆ ಮಾಡಿದೆ.
ಈ ಕುರಿತಂತೆ ಮಾತನಾಡಿರುವ ಧಾರ್ಮಿಕ ವ್ಯವಹಾರಗಳ ಕಾರ್ಯದರ್ಶಿ ನವ್ನೀತ್ ಸೆಹ್ಗಲ್, ರಾಜ್ಯ ಸರ್ಕಾರ ಇದೀಗ ಒಟ್ಟು , 1 ಸಾವಿರ ಹಿರಿಯ ನಾಗರೀಕರನ್ನು ಉಚಿತವಾಗಿ ತಿರುಪತಿ ಮತ್ತು ರಾಮೇಶ್ವರಂ ಯಾತ್ರಗೆ ಕರೆದುಕೊಂಡು ಹೋಗಲು ಸರ್ಕಾರ ನಿರ್ಧರಿಸಿದ್ದು, ಈ ಸೇವೆ ನವೆಂಬರ್ 26ರಿಂದ ಆರಂಭವಾಗಿ ಡಿಸೆಂಬರ್ ವರೆಗೂ ಮುಂದುರೆಯಲಿದೆ ಎಂದು ಹೇಳಿದ್ದಾರೆ.
ಈ ಸೇವೆಯ ಎಲ್ಲಾ ಜವಾಬ್ದಾರಿಯನ್ನು ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಶನ್ ಹೊತ್ತುಕೊಳ್ಳಲಿದೆ. ಯಾತ್ರೆಗೆ ಹೋಗುವ ಯಾತ್ರಾರ್ಥಿಗಳನ್ನು ವಿಶೇಷ ರೈಲಿನಲ್ಲಿ ಕರೆದೊಯ್ಯಲಾಗುತ್ತದೆ. ಇದಕ್ಕಾಗಿ ಈಗಾಗಲೇ 1, 044 ರೈಲ್ವೆ ಟಿಕೆಟ್ ಗಳನ್ನು ಕಾಯ್ದಿರಿಸಲಾಗಿದ್ದು, ಯಾತ್ರಾರ್ಥಿಗಳ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ತೆರೆಯಲಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


