ರಾಧೆ ಮಾ ಗಾಗಿ ಟಿವಿಯ ಲೈವ್ ಶೋನಲ್ಲಿ ಬಡಿದಾಡಿಕೊಂಡ ಜ್ಯೋತಿಷಿಗಳು
ವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ. ..

ನವದೆಹಲಿ: ವಿವಾದಿತ ದೇವ ಮಹಿಳೆ ರಾಧೆ ಮಾ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಇಬ್ಬರು ಜ್ಯೋತಿಷಿಗಳು ಲೈವ್ ಕಾರ್ಯಕ್ರಮದಲ್ಲೇ ಬಡಿದಾಡಿಕೊಂಡಿರುವ ಘಟನೆ ನಡೆದಿದೆ.
ಆಂಗ್ಲ ವಾಹಿನಿಯೊಂದರಲ್ಲಿ ವಿವಾದಿತ ದೇವಮಹಿಳೆ ರಾಧೆ ಮಾ ಬಗ್ಗೆ ಚರ್ಚೆ ನಡೆಯುವಾಗಲೇ ಇಬ್ಬರು ಪರಸ್ಪರ ಜಗಳವಾಡಿ ಹಲ್ಲೆ ಮಾಡಿಕೊಂಡ ಘಟನೆ ವರದಿಯಾಗಿದೆ.ಸ್ವಯಂ ಘೋಷಿತ ದೇವಮಾನವ ಹಾಗೂ ಮಹಿಳಾ ಜ್ಯೋತಿಷಿಯೊಬ್ಬರು ಹೊಡೆದಾಡಿಕೊಂಡಿದ್ದಾರೆ. ಸ್ವಯಂ ಘೋಷಿತ ದೇವಮಹಿಳೆ ರಾಧೇ ಮಾ ಕುರಿತಂತೆ ಹಿಂದೂ ಮಹಾಸಭಾದ ಓಂ ಹಾಗೂ ಮಹಿಳಾ ಜ್ಯೋತಿಷಿ ದೀಪಾ ಶರ್ಮ ನಡುವೆ ಚರ್ಚೆ ನಡೆಯುವಾಗ ಈ ರೀತಿಯಾಗಿದೆ.
ಆಂಗ್ಲ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜ್ಯೋತಿಷಿ ದೀಪಾ ಶರ್ಮ ಅವರ ಬಗ್ಗೆ ಓಂ ಆಡಿದ ಮಾತು ಜಗಳಕ್ಕೆ ಕಾರಣವಾಗಿದೆ. ದೀಪಾ ಶರ್ಮ ಮರ್ಯಾದೆಯಿಂದ ಮಾತನಾಡು ಎಂದು ಓಂ ಅವರಿಗೆ ಹೊಡೆಯಲು ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡ ಓಂ, ಆಕೆಯ ಕಪಾಳಕ್ಕೆ ಬಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ
ಹೀಗೆ ಇಬ್ಬರೂ ಕೆಲಕಾಲ ತಾವು ಎಲ್ಲಿದ್ದೇವೆ ಎಂಬುದನ್ನು ಅರಿಯದೇ ಬಡಿದಾಡಿಕೊಂಡರು. ಬಳಿಕ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಗೊಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


