ಇಸಿಸ್ ಸೇರಿದ ಮೊದಲ ಭಾರತೀಯ ಮಹಿಳೆ ಹೈದ್ರಾಬಾದ್ ನಲ್ಲಿ ಬಂಧನ
ಐಎಸ್ ಐಎಸ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಸೇರ್ಪಡೆ ಮಾಡುತಿದ್ದ ಮೊದಲ ಮಹಿಳೆಯನ್ನು ಹೈದ್ರಾಬಾದ್ ನಲ್ಲಿ...

ಹೈದ್ರಾಬಾದ್: ಇಸಿಸ್ ಉಗ್ರ ಸಂಘಟನೆಗೆ ಭಾರತೀಯ ಯುವಕರನ್ನು ಸೇರ್ಪಡೆ ಮಾಡುತಿದ್ದ ಮೊದಲ ಮಹಿಳೆಯನ್ನು ಹೈದ್ರಾಬಾದ್ ನಲ್ಲಿ ಶುಕ್ರವಾರ ಬಂಧಿಸಲಾಗಿದೆ.
37 ವರ್ಷದ ಅಫ್ಶಾ ಜಬೀನಾ ಅಲಿಯಾಸ್ ನಿಕ್ಕಿ ಜೋಸೆಫ್ ಬಂಧಿತ ಆರೋಪಿಯಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮುಖಾಂತರ ಕೆಲಸದ ಹುಡುಕಾಟದಲ್ಲಿರುವ ಯುವಕರನ್ನು ಹುಡುಕಿ, ತಾನು ಬ್ರಿಟಿಷ್ ಪ್ರಜೆ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಿದ್ದಳು.
ಜಬೀನ್ ಮತ್ತು ಅವಳ ಪತಿ, ಮಕ್ಕಳನ್ನು ಗಡಿಪಾರು ಮಾಡಲಾಗಿತ್ತು. ಶುಕ್ರವಾರ ಹೈದ್ರಾಬಾದ್ ವಿಮಾನ ನಿಲ್ಧಾಣದಕ್ಕೆ ಬಂದಿಳಿದ ಜಬೀನಾಳನ್ನು ತ್ರೀವ ವಿಚಾರಣೆ ನಡೆಸಿದ ನಂತರ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುಬೈನಿಂದ ಜಬೀನಾ ಹೈದ್ರಾಬಾದ್ ನಲ್ಲಿರುವ ಆಜಿಐ ವಿಮಾನನಿಲ್ಧಾಣಕ್ಕೆ ಆಗಮಿಸಿದ್ದಾಳೆ. ಆಕೆಯನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಎಸ್ಐಎಸ್ ಉಗ್ರ ಸಂಘಟನೆ ಸೇರಲು ಬಯಸಿದ್ದ ಹೈದರಾಬಾದ್ಮೂಲದ ಯುವಕ ಸಲ್ಮಾನ್ ಮೊಹಿನುದ್ದಿನ್ ಪ್ರಕರಣದಲ್ಲಿ ಜಬೀನ್ ಪ್ರಮುಖ ಆರೋಪಿಯಾಗಿದ್ದಾಳೆ. ಹೈದರಾಬಾದ್ನಿಂದ ದುಬೈಗೆ ತೆರಳಿ ಜಬೀನಾಳನ್ನು ಭೇಟಿಯಾಗುವುದು ಸಲ್ಮಾನ್ನ ಉದ್ದೇಶವಾಗಿತ್ತು. ಭೇಟಿಯ ಬಳಿಕ ಜಬೀನಾ ಹಾಗೂ ಸಲ್ಮಾನ್ ಟರ್ಕಿಗೆ ತೆರಳಿ ಆಲ್ಲಿಂದ ಸಿರಿಯಾದ ಗಡಿ ದಾಟುವ ಗುರಿ ಹೊಂದಿದ್ದರು ಎಂದು ಪೊಲೀಸ್ ಮೂಲಗಳ ತಿಳಿಸಿವೆ.
ವಿಚಾರಣೆ ವೇಳೆ ಸಲ್ಮಾನ್ ಅಫ್ಶಾ ಜಬೀನ ಬಗ್ಗೆ ಬಾಯ್ಬಿಟ್ಟಿದ್ದ. ತದ ನಂತರ ಭಾರತೀಯ ಗುಪ್ತಚರ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಆರಂಭಿಸಿತು.ಶುಕ್ರವಾರ ಆಕೆ ಹೈದ್ರಾಬಾದ್ ಬರುತ್ತಿದ್ದ ವಿಷಯ ತಿಳಿದು ಆಕೆಯನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


